»   »  ಹಾಸ್ಯಭರಿತ, ಸಾಂಸಾರಿಕ ಪ್ರೇಮಕತೆ 2ನೇ ಮದುವೆ

ಹಾಸ್ಯಭರಿತ, ಸಾಂಸಾರಿಕ ಪ್ರೇಮಕತೆ 2ನೇ ಮದುವೆ

Subscribe to Filmibeat Kannada

ದಿನೇಶ್‌ಬಾಬು ಅವರ ನಿರ್ದೇಶನದ ಚಿತ್ರಗಳೆಂದರೆ ಅದರಲ್ಲಿ ಏನೋ ಒಂದು ಸ್ಪೆಷಲ್ ಇದ್ದೇ ಇರುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ 'ಮಿ.ಗರಗಸ' ಚಿತ್ರ ಮಾಡಿ ಗೆಲ್ಲಿಸಿದವರು. ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಛನದಲ್ಲಿ ಕೆ.ಎ. ಸುರೇಶ್ ಮತ್ತು ಕೆ. ರಾಜೀವ್ ನಿರ್ಮಿಸಿರುವ ಚಿತ್ರ 'ಎರಡನೇ ಮದುವೆ'.

ಚಿತ್ರದ ಚಿತ್ರೀಕರಣ, ಡಬ್ಬಿಂಗ್, ರೀರೆಕಾರ್ಡಿಂಗ್ ಸಂಪೂರ್ಣಗೊಂಡಿದ್ದು, ಇದೀಗ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದಿದೆ. ಬಹಳ ದಿನಗಳ ನಂತರ ಅನಂತ್‌ನಾಗ್-ಸುಹಾಸಿನಿ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಭರಿತ, ಸಾಂಸಾರಿಕ ಪ್ರೇಮ ಕಥಾಹಂದರದ ಕತೆ.

ಅನಂತ್-ಸುಹಾಸಿನಿಯಂಥ ಪ್ರತಿಭಾವಂತ ಜೋಡಿಯ ಜೊತೆಗೆ ನೆನಪಿರಲಿ ಪ್ರೇಮ್, ಜೆನೀಫರ್ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ-ಚಿತ್ರಕಥೆ, ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜೈಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನ ಇದ್ದು, ಶರಣ್, ತಾರಾ, ರಂಗಾಯಣ ರಘು, ಸಿಂಧೂ, ನವ್ಯ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada