»   » ರಿಜಿಸ್ಟ್ರಾರ್ ಕಛೇರಿಯಲ್ಲಿ ಚಿರಂಜೀವಿ ,ರಾಗಿಣಿ!

ರಿಜಿಸ್ಟ್ರಾರ್ ಕಛೇರಿಯಲ್ಲಿ ಚಿರಂಜೀವಿ ,ರಾಗಿಣಿ!

Posted By:
Subscribe to Filmibeat Kannada

ಕೃಷ್ಣ (ಚಿರಂಜೀವಿ ಸರ್ಜಾ), ನಂದಿನಿ (ರಾಗಿಣಿ) ಕಾಲೇಜಿನಲ್ಲಿ ಪರಸ್ಪರ ಪ್ರೀತಿಸಿ ಒಂದು ದಿನ ಮದುವೆಯಾಗಲು ನಿಶ್ಚಯಿಸಿ ರಿಜಿಸ್ಟ್ರಾರ್ ಕಛೇರಿಗೆ ತೆರಳುತ್ತಾರೆ. ಅಲ್ಲಿ ನಂದಿನಿ ಜ್ವರದಿಂದ ಬಳಲಿ ಮೂರ್ಛೆ ಹೋಗುತ್ತಾಳೆ. ಅವಳನ್ನು ಅವಳ ತಂದೆ-ತಾಯಿ ಬಳಿ ಕರೆದುಕೊಂಡು ಬಂದ ಕೃಷ್ಣ ಅವರಿಂದ ಅವಮಾನಿತನಾಗುತ್ತಾನೆ. ಈ ಸನ್ನಿವೇಶಗಳನ್ನು 'ಗಂಡೆದೆ' ಚಿತ್ರಕ್ಕಾಗಿ ಮುಜೀರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಅಕುಲ್ ಶಿವ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರಿಸಿಕೊಂಡರು.

ರಾಮು ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ 'ಗಂಡೆದೆ' ಚಿತ್ರಕ್ಕಾಗಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣವು ಭರದಿಮ್ದ ಸಾಗಿದ್ದು, ಮಾರ್ಚ್ ಎರಡನೇವಾರದಲ್ಲಿ ಗೀತೆಗಳ ಚಿತ್ರೀಕರಣ ಸಾಗಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.

ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ, ಸಾಹಿತ್ಯ, ಚಕ್ರಿ ಸಂಗೀತ, ಮುನಿರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲೆ, ಹರ್ಷಾನ್ ನೃತ್ಯ, ಉಮೇಶ್ ನಿರ್ಮಾಣ ನಿರ್ವಹಣೆಯಿದೆ. ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ರಾಗಿಣಿ, ದೇವರಾಜ್, ರಮೇಶ್‌ಭಟ್, ರಂಗಾಯಣರಘು, ಸಾಧುಕೋಕಿಲ, ಅರುಣಾ ಬಾಲ್‌ರಾಜ್, ಚಿತ್ರಾ ಶೆಣೈ, ಲಕ್ಷ್ಮಣ್, ಪವನ್, ಸಂಕೇತ್ ಕಾಶಿ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada