»   »  ನಾಗಶೇಖರ್‌ಗೆ ಕಾಗೆ ಹಾರಿಸಿದ ಗಣೇಶ

ನಾಗಶೇಖರ್‌ಗೆ ಕಾಗೆ ಹಾರಿಸಿದ ಗಣೇಶ

Posted By: *ಜಯಂತಿ
Subscribe to Filmibeat Kannada
Ganesh
ಗಣೇಶ ಮೆಲ್ಲಗೆ ಜಾರಿಕೊಳ್ಳುತ್ತಿದ್ದಾರೆ. ಅವರನ್ನೇ ನಂಬಿಕೊಂಡಿದ್ದ ನಾಗಶೇಖರ ಕಣ್‌ಕಣ್ ಬಿಡುತ್ತಿದ್ದಾರೆ. ವಿಷಯ ಏನಪ್ಪಾ ಅಂದರೆ, ಇನ್ನು ಒಂದು ವರ್ಷ ನಾನು ನನ್ನ ಮುದ್ದಿನ ಮಗಳನ್ನು ಬೆಳೆಸಬೇಕು. ಹೆಂಡತಿ ಬಾಣಂತಿ. ಅವಳ ಆರೈಕೆ ಮಾಡಬೇಕು. ಅದಕ್ಕೇ ಸ್ವಂತ ಸಿನಿಮಾ ನಿರ್ಮಾಣ ಅಲ್ಲಿಯವರೆಗೆ ಸಾಧ್ಯವೇ ಇಲ್ಲ ಅಂತ ಗಣೇಶ ಎಂದಿನ ತಮ್ಮ ಬಿಟ್ಟುಬಿಟ್ಟು ಮಾತಾಡುವ ಶೈಲಿಯಲ್ಲಿ ಹೇಳಿದ್ದಾರೆ. ಯುಗಾದಿ ಹಬ್ಬದ ದಿನ ಅವರಿಗೆ ಹೆಣ್ಣು ಮಗಳಾದ ಖುಷಿಯಲ್ಲಿ ಒಬ್ಬ ನಿರ್ದೇಶಕನ ಕನಸನ್ನೇ ಅವರು ಮುಂದೂಡಿದ್ದಾರೆ.

ಉಲ್ಲಾಸ ಉತ್ಸಾಹ ಆದಮೇಲೆ ಗಣೇಶ ತಮ್ಮದೇ ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ನಿರೀಕ್ಷೆ ಇತ್ತು. ಹಾಗಂತ ಅವರು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು ಕೂಡ. ತಮ್ಮ ಬ್ಯಾನರ್‌ನ ಚಿತ್ರದ ನಿರ್ದೇಶಕ ನಾಗಶೇಖರ ಅಂತಲೂ ಅವರು ಘೋಷಿಸಿದ್ದರು. ಆ ಸಿನಿಮಾ ಧ್ಯಾನದಲ್ಲೇ ಇರುವ ನಾಗಶೇಖರ ಇನ್ನೂ ಒಂದು ವರ್ಷ ಸುಮ್ಮನಿರಬೇಕು ಅಂದರೆ ಹೇಗೆ? ಆಗೀಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿರುವ ನಾಗಶೇಖರ ಅರಮನೆಯಂಥ ಸದಭಿರುಚಿಯ ಸಿನಿಮಾ ನಿರ್ದೇಶಿಸಿದ ಮೇಲೆ ಅವಕಾಶಗಳೇ ಇಲ್ಲದಂತಾದರು.

ಅತ್ತ ನಟನೆಯೂ ಇಲ್ಲ, ಇತ್ತ ನಿರ್ದೇಶನದ ಅವಕಾಶವೂ ಇಲ್ಲ ಎಂಬ ಪರಿಸ್ಥಿತಿ. ಗಣೇಶನ ನಿರ್ಮಾಣದ ಸಣ್ಣ ನಿರೀಕ್ಷೆಯೂ ಈಗ ಕಮರಿದಂತಾಗಿದೆ. ಇನ್ನೊಂದು ವರ್ಷವಾದ ಮೇಲೆ ಗಣೇಶ ಸಿನಿಮಾ ನಿರ್ಮಿಸುತ್ತಾರೆ ಅನ್ನುವುದಕ್ಕೆ ಏನು ಗ್ಯಾರಂಟಿ ಹೇಳಿ? ಸ್ಟಾರ್‌ಗಳನ್ನು ಕ್ರಿಯಾಶೀಲರು ನೆಚ್ಚಿಕೊಳ್ಳುವುದು ಈ ಕಾಲಮಾನದಲ್ಲಿ ಎಷ್ಟು ಕಷ್ಟ ನೋಡಿ.

ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್
ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಹೆಣ್ಣು ಮಗು
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada