»   » ಕನ್ನಡ ಚಿತ್ರೋದ್ಯಮದಲ್ಲಿ ಈ ವಾರ 'ರವಿ'ವಾರ

ಕನ್ನಡ ಚಿತ್ರೋದ್ಯಮದಲ್ಲಿ ಈ ವಾರ 'ರವಿ'ವಾರ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಈ ವಾರಶುಕ್ರವಾರವೂ 'ರವಿ'ವಾರವಾಗಿದೆ. ಅರ್ಥಾತ್ ಕ್ರೇಜಿ ಸ್ಟಾರ್ ಅಭಿನಯದ ಎರಡು ಚಿತ್ರಗಳು ತೆರೆಕಾಣುತ್ತಿವೆ! ಒಂದು ಅವರು ನಾಯನ ನಟನಾಗಿ ಅಭಿನಯಿಸಿರುವ 'ಹೂ' ಚಿತ್ರವಾದರೆ ಮತ್ತೊಂದು ಅವರು ಅತಿಥಿ ಪಾತ್ರದ 'ಐತಲಕ್ಕಡಿ' ಒಟ್ಟಿಗೆ ತೆರೆಕಾಣುತ್ತಿವೆ.

ಹಲವು ದಿನಗಳ ನಂತರ ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ ಚಿತ್ರ 'ಹೂ'. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಕೂಡ ಅವರದೆ. ಪ್ರೀತಿಯನ್ನು 'ಹೂ'ಗೆ ಹೋಲಿಸಿರುವುದಾಗಿ ತಿಳಿಸಿರುವ ರವಿಚಂದ್ರನ್ ಅವರು ಈ ಚಿತ್ರ ನೋಡುಗರ ಮನಸೂರೆಗೊಳ್ಳಲಿದೆ ಎನ್ನುತ್ತಾರೆ.

ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿರುವ 'ಹೂ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್ ಗಾಂಧಿ ನಿರ್ಮಿಸಿರುವ 'ಹೂ' ಚಿತ್ರ ಈ ವಾರ(ಜೂ.4) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರವಿಚಂದ್ರನ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯರು ಮೀರಾಜಾಸ್ಮಿನ್ ಹಾಗೂ ನಮಿತಾ. ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ಶರಣ್ ಮುಂತಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಐತಲಕ್ಕಡಿ
ಚಿತ್ರಕುಟೀರ ಸಂಸ್ಥೆ ನಿರ್ಮಿಸಿರುವ 'ಐತಲಕ್ಕಡಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ 108 ಜನ ಕಲಾವಿದರ ಅಭಿನಯದಲ್ಲಿ ಮೂಡಿಬಂದಿರುವ ಅಪರೂಪದ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ವಿಭಿನ್ನ ಕಥೆಯುಳ್ಳ ಈ ಚಿತ್ರದ ಮುಖ್ಯಪಾತ್ರದಲ್ಲಿ ಬುಲೆಟ್‌ಪ್ರಕಾಶ್ ಹಾಗೂ ರಂಗಾಯಣರಘು ನಟಿಸಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್, ನವರಸನಾಯಕ ಜಗ್ಗೇಶ್, ಸುದೀಪ್, ವಿಜಯ್, ವಿಜಯರಾಘವೇಂದ್ರ, ನೀತು ಮುಂತಾದವರು ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು. ಈಗಾಗಲೆ ಬಿಡುಗಡೆಗೊಂಡಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎನ್ನುತ್ತಾರೆ ನಿರ್ಮಾಪಕರಲ್ಲೊಬ್ಬರಾದ ಬುಲೆಟ್‌ಪ್ರಕಾಶ್.

ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ಸಹಕಾರವೇ ನಮ್ಮ ಚಿತ್ರ ಉತ್ತಮವಾಗಿ ಮೂಡಿಬರಲು ಮುಖ್ಯ ಕಾರಣ ಎಂದು ಚಿತ್ರಕುಟಿರ ಸಂಸ್ಥೆಯ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ. ಸಾಧುಕೋಕಿಲಾ 'ಐತಲಕ್ಕಡಿ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿರುವ ಜೆ.ಜಿ.ಕೃಷ್ಣ ಅವರು ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ತುಷಾರ ರಂಗನಾಥ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಆರ್.ಡಿ.ರವಿ ಅವರ ಸಂಕಲನವಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada