»   »  ಕನ್ನಡ ಚಲನಚಿತ್ರ ಅಕಾಡೆಮಿ ಜೂನ್ 5ಕ್ಕೆ ಆರಂಭ

ಕನ್ನಡ ಚಲನಚಿತ್ರ ಅಕಾಡೆಮಿ ಜೂನ್ 5ಕ್ಕೆ ಆರಂಭ

Subscribe to Filmibeat Kannada

ಬೆಂಗಳೂರು, ಜೂ.2:ಕನ್ನಡ ಚಲನಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ 2009 ರ ಜೂನ್ 5 ರಿಂದ ಕಾರ್ಯಾರಂಭಗೊಳ್ಳಲಿದೆ. ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಅವರು ಅಕಾಡೆಮಿಗೆ ಚಾಲನೆ ನೀಡಲಿದ್ದಾರೆ. ಸಚಿವರುಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್, ಶೋಭಾ ಕರಂದ್ಲಾಜೆ ಹಾಗೂ ಚಿತ್ರರಂಗದ ಗಣ್ಯರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಚಲನಚಿತ್ರ ಅಕಾಡೆಮಿಯು ಸರ್ಕಾರ ಹಾಗೂ ಚಲನಚಿತ್ರ ಮಾಧ್ಯಮಗಳ ನಡುವಿನ ಸಂಪರ್ಕ ಸೇತುವೆಗಾಗಿ ಕಾರ್ಯನಿರ್ವಹಸಲಿದೆ. ಸಿನಿಮಾ ಚಳುವಳಿಗೆ ಪೂರಕವಾಗುವಂತೆ ಸಿನಿಮಾ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸದಭಿರುಚಿಯ ಪ್ರೇಕ್ಷಕ ವರ್ಗವನ್ನು ಸಿದ್ಧಗೊಳಿಸಲು ಅನುಕೂಲವಾಗುವಂತೆ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಚಲನಚಿತ್ರ ಅಕಾಡೆಮಿಯು ಕೈಗೊಳ್ಳಲಿದೆ.

ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ನೆರವಾಗುವ ನಿಟ್ಟಿನಲ್ಲಿ ಅಕಾಡೆಮಿಯು ರಸಗ್ರಹಣ ಶಿಬಿರ, ಶಾಲಾ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್ ಸ್ಥಾಪನೆ, ಜಿಲ್ಲಾ ಕೇಂದ್ರ ಹಾಗೂ ಗಡಿನಾಡು ಪ್ರದೇಶಗಳಲ್ಲಿ ಚಿತ್ರೋತ್ಸವದ ಏರ್ಪಾಡು ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada