»   »  ಸುಂದರ ಪ್ರಕಾಶನದಿಂದ ಕನ್ನಡ ಸಿನಿಮಾ ಪುಸ್ತಕಗಳು

ಸುಂದರ ಪ್ರಕಾಶನದಿಂದ ಕನ್ನಡ ಸಿನಿಮಾ ಪುಸ್ತಕಗಳು

Subscribe to Filmibeat Kannada
Gauri Sundar
ಸುಂದರ ಪ್ರಕಾಶನದ ಗೌರಿ ಸುಂದರ್ ಎರಡು ಹೊಸ ಸಾಹಸಗಳಿಗೆ ಕೈಹಾಕಿದ್ದಾರೆ. ಒಂದು 1934ರಿಂದ 2008ರವರೆಗಿನ ಮೂರು ಅತ್ಯ್ಯ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವುದು. ಎರಡನೆಯದು 1934 ರಿಂದ 2008ರವರೆಗಿನ ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ಪುಸ್ತಕ ಪ್ರಕಟಣೆ.ಈ ಎರಡು ಹೊಸ ಯೋಜನೆಗಳಿಗೂ ಮುನ್ನ ಜೂನ್ ಅಂತ್ಯಕ್ಕೆ 50 ಪುಸ್ತಕಗಳನ್ನು ಹೊರತರುವ ಗುರಿಯನ್ನು ಅವರು ಹೊಂದಿದ್ದಾರೆ.

ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಈಗ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತರಲು ನಿರ್ಧರಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ಕುರಿತು ಬರೆದ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೂ ದೊರಕಿತ್ತು. ಇದು ಗೌರಿ ಸುಂದರ್ ಅವರ ಮೊದಲ ಪುಸ್ತಕ. ನಂತರ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಕುರಿತು ಬರೆದ ಪುಸ್ತಕಕ್ಕೂ ಪ್ರತಿಕ್ರಿಯೆ ಅದ್ಭುತವಾಗಿತ್ತು. ಕಳೆದ ಮೂರುವರೆ ವರ್ಷಗಳಿಂದ ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿರುವ ಅವರು ಇದುವರೆಗೂ 127 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಚಿತ್ರೋದ್ಯಮ, ಚಿತ್ರರಂಗದ ದಿಗ್ಗಜರ ಬಗ್ಗೆ ಪುಸ್ತಕಗಳನ್ನು ತರಬೇಕು ಎಂಬುದು ಅವರ ಒತ್ತಾಸೆ. ಹಾಗಾಗಿ ಇದೇ ಏಪ್ರಿಲ್ 6ರ ಭಾನುವಾರ ಆರು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಪುಸ್ತಕ ಬೇಸಾಯಕ್ಕೆ ಚಾಲನೆ ನೀಡಲಿದ್ದಾರೆ. ಅಭಿನಯ ಶಾರದೆ ಜಯಂತಿ,ನಟರಾದ ದ್ವಾರಕೀಶ್, ದೇವರಾಜ್, ಪ್ರಜ್ವಲ್ ದೇವರಾಜ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಭಾನುವಾರ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರಕ್ಕೆ ಬರಲು ಮರೆಯಬೇಡಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಒಂದು ಅಪರೂಪದ ಸಿನಿಮಾ ಪುಸ್ತಕ ಬಿಡುಗಡೆ
ಹಲೋ ಫಿಲ್ಮ್ ಚೇಂಬರ್,ಪುಸ್ತಕಗಳು ಬೇಕು!
ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada