»   »  ಲೈಂಗಿಕ ಜಾಲದಲ್ಲಿ ಕನ್ನಡ ಸಿನಿಮಾ ನೃತ್ಯ ಸಂಯೋಜಕಿ

ಲೈಂಗಿಕ ಜಾಲದಲ್ಲಿ ಕನ್ನಡ ಸಿನಿಮಾ ನೃತ್ಯ ಸಂಯೋಜಕಿ

Subscribe to Filmibeat Kannada

ಲೈಂಗಿಕ ಜಾಲದಲ್ಲಿ ಭಾಗಿಯಾಗಿದ್ದ ಕನ್ನಡ ಚಿತ್ರರಂಗದ ನೃತ್ಯ ಸಂಯೋಜಕಿ ಅಂಬಿಕಾ ಕಬಡೆ ಮತ್ತು ನಾಲ್ಕು ಮಂದಿ ಹುಡುಗಿಯರನ್ನು ಸಿಸಿಬಿಯ ಮಹಿಳಾ ಮತ್ತು ಮಾದಕ ವಸ್ತು ಪಡೆ ಹಾಗೂ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಅಂಬಿಕಾ ಕಬಡೆ ಗದಗ ಮೂಲದವರು.

ಕನ್ ಕಾರ್ಡೆ ಹೋಮ್ ಲೇಔಟ್ ನ ಸರ್ವಿಸ್ ಅಪಾರ್ಟ್ ಮೆಂಟ್ ಮೇಲೆ ಭಾನುವಾರ ದಾಳಿ ಮಾಡಿದ ಸಿಸಿಬಿ ಪೊಲೀಸರು ಐದು ಹುಡುಗಿಯರು ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದರು. ರು.30,000 ಹಾಗೂ 17 ಮೊಬೈಲ್ ಫೋನ್ ಗಳನ್ನು ಅವರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಭಾರತ ಹುಡುಗಿಯರಿಗೆ ರು.10,000 ದಿಂದ ರು.20,000 ಚಾರ್ಚ್ ಮಾಡುತ್ತಿದ್ದರು. ದಕ್ಷಿಣ ಭಾರತದ ಹುಡುಗಿಯರಿಗೆ ರು.5,000 ನಿಗದಿಪಡಿಸಿ ಈ ದಂಧೆಯನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಹುಡುಗಿಯರಲ್ಲಿ ಮುಂಬೈ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲದ ಹುಡುಗಿಯರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada