For Quick Alerts
  ALLOW NOTIFICATIONS  
  For Daily Alerts

  ವೀರಪ್ಪನ್ ಅಟ್ಟಹಾಸ ಚಿತ್ರ ಬಿಡುಗಡೆ ಹಾದಿ ಸುಗಮ

  By Rajendra
  |

  ದಂತಚೋರ, ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಕತೆಯಾಧಾರಿತ ಚಿತ್ರ 'ಅಟ್ಟಹಾಸ' ಬಿಡುಗಡೆ ಹಾದಿ ಸುಗಮವಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ನಕ್ಕೀರನ್ ಗೋಪಾಲ್ ತಂದಿದ್ದ ತಡೆಯಾಜ್ಞೆಯನ್ನು ಚೆನ್ನೈ ಸಿವಿಲ್ ನ್ಯಾಯಾಲಯ ತಳ್ಳಿಹಾಕಿದೆ.

  ಈ ಸಂಬಂಧ ಮಾತನಾಡಿದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಎಎಂಆರ್ ರಮೇಶ್, ನಕ್ಕೀರನ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದ ಕಾರಣ 'ಅಟ್ಟಹಾಸ' ಚಿತ್ರೀಕರಣರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ತಡೆಯಾಜ್ಞೆ ತೆರವಾಗಿದ್ದು ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತಿರುದಾಗಿ ತಿಳಿಸಿದ್ದಾರೆ.

  ತಾವು 'ಅಟ್ಟಹಾಸ' ಚಿತ್ರ ಮಾಡಲು ಹೊರಟಾಗ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ತಮ್ಮ ಬಳಿ ರು.1.50 ಕೋಟಿ ಹಣ ಕೇಳಿದ್ದರು. ತಾವು ಕೊಡದೆ ಇದ್ದ ಕಾರಣ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.

  ತಾವು 250ಕ್ಕೂ ಹೆಚ್ಚು ಜನಗರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಿ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ. ವೀರಪ್ಪನ್ ಜತೆಗಿದ್ದವರು. ಡಾ.ರಾಜ್ ಕುಮಾರ್ ಅಪಹರಣ ಸಂದರ್ಭದಲ್ಲಿ ಅವರೊಂದಿಗಿದ್ದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕತೆಯನ್ನು ಎಲ್ಲೂ ತಿರುಚಿಲ್ಲ ಎಂದು ರಮೇಶ್ ವಿವರ ನೀಡಿದ್ದಾರೆ. (ಏಜೆನ್ಸೀಸ್)

  English summary
  AMR Ramesh’s long-awaited biopic on forest brigand Veerappan 'Attahasa' is all set to be released in June, 2012. But Ramesh can now heave a sigh of relief as the 17th assistant civil court, Chennai, has ruled in his favour by lifting the interim stay sought by Gopal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X