»   » ವಿಷ್ಣುವರ್ಧನ ಚಿತ್ರದ ಬಗ್ಗೆ ದ್ವಾರಕೀಶ್ ಹೀಗಂತಾರೆ

ವಿಷ್ಣುವರ್ಧನ ಚಿತ್ರದ ಬಗ್ಗೆ ದ್ವಾರಕೀಶ್ ಹೀಗಂತಾರೆ

Posted By:
Subscribe to Filmibeat Kannada

ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರ ಈ ತಿಂಗಳು (ಡಿಸೆಂಬರ್ 8, 2011) ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ನಾಯಕರಾಗಿ ಸುದೀಪ್ ನಟಿಸಿದ್ದಾರೆ. ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಕಾರಣ, ಕನ್ನಡದ ಪ್ರಸಿದ್ಧ ಮೇರು ನಟ 'ಡಾ. ವಿಷ್ಣುವರ್ಧನ್' ಹೆಸರು ಹಾಗೂ ವಿಷ್ಣು ಆಪ್ತಮಿತ್ರರಾಗಿದ್ದ ದ್ವಾರಕೀಶ್ ನಿರ್ಮಾಣ. ಶೀರ್ಷಿಕೆ ವಿಷಯದಲ್ಲಾದ ವಿವಾದ ಇನ್ನೊಂದು ಕಾರಣ.

ಈ ಚಿತ್ರದ ಬಗ್ಗೆ 'ವಿಷ್ಣುವರ್ಧನ..ಓನ್ಲಿ ವಿಷ್ಣುವರ್ಧನ..' ಎಂಬ ಹೆಡ್ಡಿಂಗ್ ನಲ್ಲಿ 'ಸಿನಿಗಂಧ' ಮಾಸಪತ್ರಿಕೆಯಲ್ಲಿ ದ್ವಾರಕೀಶ್ ಹೇಳಿದ ಮಾತುಗಳು ಈ ರೀತಿ ದಾಖಲಾಗಿದೆ... "ಈ ದ್ವಾರಕೀಶ್ ಏನೇ ಮಾಡಿದರೂ ಅದನ್ನು ಡಿಫರೆಂಟ್ ಆಗಿಯೇ ಮಾಡೋದು. ನನ್ನ ಕುಚುಕು ಕಮ್ ಜೀವದ ಗೆಳೆಯ 'ವಿಷ್ಣುವರ್ಧನ್' ಹೆಸರಿನಲ್ಲಿ ಈ ಸಿನಿಮಾ ಮಾಡಿದ್ದೀನಿ.

ನನ್ನ ಪ್ರೀತಿಯ ಸುದೀಪ್ ನಾಯಕನ ಪಾತ್ರ ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಅವನ ಕೆಲಸದ ಮೇಲಿನ ಶ್ರದ್ಧೆ ನೋಡಿ ನಿಜಕ್ಕೂ ನಾನು ಭಾವುಕನಾದೆ. ಖಂಡಿತ ವಿಷ್ಣುವರ್ಧನ ನಿಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ನಿಮ್ಮನ್ನು ರಂಜಿಸುತ್ತೆ ಎಂದು ಹೆಮ್ಮೆಯಿಂದ ಹೇಳುತ್ತೇನೆ" (ಒನ್ ಇಂಡಿಯಾ ಕನ್ನಡ- ಕೃಪೆ: ಸಿನಿಗಂಧ)

English summary
Kannada movie Vishnuvardhana is releasing next week on Dec 8, 2011. Sudeep, Bhavana and Priyamani are the starrer. Dwarakish produced this. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada