ಸಿಂಗಪುರಕ್ಕೆ ಪುನೀತ್ ರಾಜ್ ಕುಮಾರ್ 'ಜಾಕಿ' ದಾಂಗುಡಿ
ಈಗಾಗಲೆ ರಾಜ್ಯದಾದ್ಯಂತ ಶತದಿನೋತ್ಸವ ಆಚರಿಸಿ ಭರ್ಜರಿ ಜಯಭೇರಿ ಭಾರಿಸಿರುವ 'ಜಾಕಿ' ಚಿತ್ರ ಸಿಂಗಪುರಕ್ಕೆ ದಾಂಗುಡಿ ಇಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಭಾವನಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಸ್ಯಾಂಡಲ್‌ವುಡ್ ಸಿನಿ ಎಂಟರ್‌ಟೈನ್‌ಮೆಂಟ್ ಸಿಂಗಪುರದಲ್ಲಿ ಬಿಡುಗಡೆ ಮಾಡುತ್ತ್ತಿದೆ.
ಮಾರ್ಚ್ 6, 2011ರಂದು 'ಜಾಕಿ' ಸಿಂಗಪುರದ ಫ್ರೀ ಸೀಟಿಂಗ್ ಥಿಯೇಟರ್‌ನಲ್ಲಿ ಸಂಜೆ 3ಗಂಟೆಗೆ ತೆರೆಕಾಣುತ್ತಿದೆ. ಟಿಕೆಟ್ ಬೆಲೆ ಸಿಂಗಪುರ ಡಾಲರ್ 14 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಬಾಕ್ಸಾಫೀಸಲ್ ಗಳಿಕೆಯಲ್ಲಿ ಅಪಾರ ಲಾಭ ಮಾಡಿತ್ತು. ಈಗಾಗಲೆ ಈ ಚಿತ್ರ ವಿದೇಶಗಳಲ್ಲೂ ತೆರೆಕಂಡಿದೆ. ಈಗ ಸಿಂಗಪುರ ಕನ್ನಡಿಗರನ್ನು ರಂಜಿಸಲು 'ಜಾಕಿ' ಸಿಂಗಪುರಕ್ಕೆ ಜಂಪ್ ಮಾಡುತ್ತಿದೆ.
ಜಾಕಿ' ಚಿತ್ರದ ಪ್ರಮುಖ ಆಕರ್ಷಣೆ ಹಾಡುಗಳು. ಕತೆ, ಚಿತ್ರಕತೆ ಹಾಗೂ ಸೂರಿ ಅಚ್ಚುಕಟ್ಟಾದ ನಿರ್ದೇಶನ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. 'ಜಾಕಿ' ಚಿತ್ರದ ಹಾಡುಗಳು ಈಗಲೂ ಟಾಪ್ ಟೆನ್‌ನಲ್ಲಿ ಸ್ಥಾನಪಡೆದಿವೆ ಎಂದರೆ ಅದರ ಜನಪ್ರಿಯತೆಯನ್ನು ನೀವೇ ಊಹಿಸಿ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎನ್ನಬಹುದು.


Click it and Unblock the Notifications











