For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ಕಿಂಗ್ ಪುನೀತ್ ಹುಡುಗರು ಇದೇ ಗುರುವಾರ

  By Rajendra
  |

  ಬಾಕ್ಸಾಫೀಸ್ ಕಿಂಗ್ ಪುನೀತ್ ರಾಜ್ ಕುಮಾರ್ ಅಭಿನಯದಹುಡುಗರು ಚಿತ್ರ ಇದೇ ಗುರುವಾರ (ಮೇ.5) ತೆರೆಗೆ ಅಪ್ಪಳಿಸುತ್ತಿದೆ. ಈ ಹಿಂದೆ ಮೇ 6ಕ್ಕೆ ತೆರೆಕಾಣಲಿದೆ ಎಂಬ ಸುದ್ದಿ ಇತ್ತು. ಡಾ.ರಾಜ್ ಕುಟುಂಬದ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ ಇದಾಗಿದ್ದು ಗುರು ರಾಘವೇಂದ್ರರ ಆಶೀರ್ವಾದದೊಂದಿಗೆ ತೆರೆಗೆ ಬರುತ್ತಿದೆ.

  ಮೇ ತಿಂಗಳಲ್ಲೇ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗಾಗಲೆ ರಾಜ್ ಕುಟುಂಬಿಕರು ಚಿತ್ರವನ್ನು ನೋಡಿದ್ದು ಚಿತ್ರ ಚೆನ್ನಾಗಿ ಮೂಡಿಬಂದಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಸೇರಿದಂತೆ ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ 'ಹುಡುಗರು' ಬಿಡುಗಡೆಯಾಗುತ್ತಿದೆ. 'ಮಠ' ಗುರುಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದ್ದು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 'ಜಾಕಿ' ಚಿತ್ರದ ಬಳಿಕ ನಿರ್ದೇಶಕ ಕಮ್ ಗೀತ ಸಾಹಿತಿ ಯೋಗರಾಜ್ ಭಟ್ ಎಲ್ಲ ಗೀತೆಗಳನ್ನು ರಚಿಸಿರುವುದು ವಿಶೇಷ.

  English summary
  Power Star Puneet Rajkumar and Radhika Pandit lead movie Hudugaru all set to release on 5th May. The movie Produced by Sri Chakreshwari Combines is expected to release in at least 150 screens all over Karnataka. Yogish, Srinagara Kitty, Rangayana Raghu, Sudha Belawadi, Gururaj Hoskote and many more artists are in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X