Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಕ್ಕು ನಗಿಸಲು ಬರುತ್ತಿದ್ದಾರೆ ರಾಮರಾಮ ರಘುರಾಮ
ಚಿತ್ರದ ಪೋಸ್ಟರ್‌ಗಳು ಹಾಗೂ ಸ್ಟಿಲ್‌ಗಳನ್ನು ನೋಡಿದರೆ ರಾಮ ರಾಮ ರಘುರಾಮ ಇದು ಯಾವ ಸಿನಿಮಾ ಗುರು ಅನ್ನಿಸುತ್ತದೆ. ಆದರೆ ಇದೊಂದು ಪರಿಶುದ್ಧ ಮನರಂಜನಾತ್ಮಕ ಚಿತ್ರ ಎನ್ನುತ್ತಾರೆ ಕಥೆ, ಚಿತ್ರಕಥೆಯನ್ನು ಹೆಣೆದಿರುವ ಚಿತ್ರದ ನಿರ್ದೇಶಕ ಆರ್ ರಘುರಾಜ್. ಮೈಸೂರು ಸುತ್ತಮುತ್ತ, ಬ್ಯಾಂಕಾಕ್ ಹಾಗೂ ಚೈನಾ ಗಡಿ ಭಾಗದಲ್ಲಿ ಚಿತ್ರೀಕರಣಗೊಂಡಿರುವುದು ಈ ಚಿತ್ರದ ವಿಶೇಷ.
ಜಯಣ್ಣ ಕಂಬೈನ್ಸ್ ಅರ್ಪಿಸುವ, ಮಯ ಮೂವೀಸ್ ಲಾಂಛನದಲ್ಲಿ ಜಿ.ಎನ್.ರಾಜಶೇಖರನಾಯ್ಡು ಹಾಗೂ ಬಿ.ವಿ.ಪ್ರಮೋದ್ ನಿರ್ಮಿಸಿರುವ 'ರಾಮರಾಮ ರಘುರಾಮ ' ಚಿತ್ರ ಈ ವಾರ(ಮಾ.4) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯನಟರಿಂದ ತುಂಬಿರುವ ಈ ಚಿತ್ರ ಪ್ರೇಕ್ಷಕರನ್ನು ನಕ್ಕು ನಲಿಸಲಿದೆ. ದೊಡ್ಡಣ್ಣ, ರಂಗಾಯಣರಘು, ಸಾಧುಕೋಕಿಲಾ, ಲಕ್ಷ್ಮೀಶರ್ಮ, ಶೋಭರಾಜ್, ಲೋಕನಾಥ್, ಅರುಣ್‌ಸಾಗರ್ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಪಿ.ಆರ್.ಸೌಂದರ್‌ರಾಜ್ ಸಂಕಲನ, ಶಂಕರ್ ನೃತ್ಯ ನಿರ್ದೇಶನ, ಪಳನಿರಾಜ್ ಸಾಹಸ ನಿರ್ದೇಶನ, ಆನಂದ್-ಪ್ರಸನ್ನ ಕಲಾ ನಿರ್ದೇಶನ ಹಾಗೂ ಅನಿಲ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ 'ರಾಮರಾಮ ರಘುರಾಮ' ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.