»   » 'ಡೆಡ್ಲಿ 2' ರಲ್ಲಿ ಹಿರಿಯ ನ್ಯಾಯವಾದಿ ಎಂಟಿ ನಾಣಯ್ಯ

'ಡೆಡ್ಲಿ 2' ರಲ್ಲಿ ಹಿರಿಯ ನ್ಯಾಯವಾದಿ ಎಂಟಿ ನಾಣಯ್ಯ

Posted By:
Subscribe to Filmibeat Kannada

ರವಿ ಶ್ರೀವತ್ಸ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ 'ಡೆಡ್ಲಿ 2' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಕಲಾ ನಿರ್ದೇಶಕ ಆನಂದ್ ಅವರು ನಿರ್ಮಿಸಿದ ವಿಶೇಷವಾದ ಕೋರ್ಟ್ ಸೆಟ್‌ನಲ್ಲಿ ಫೆ.26 ಹಾಗೂ 27 ರಂದು ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಎಸಿಪಿ ಪಾತ್ರಧಾರಿ ದೇವರಾಜ್, ಸೋಮನತಾಯಿ ಪಾತ್ರಧಾರಿ ಸುಹಾಸಿನಿ ಹಾಗೂ ರವಿಕಾಳೆ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಒಟ್ಟು 6 ದಿನಗಳ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮೈಸೂರಿನಲ್ಲಿ ಈಗಾಗಲೇ 4 ದಿನ ನಡೆದಿದ್ದು, ಕಂಠೀರವಸ್ಟುಡಿಯೋದಲ್ಲಿ 2 ದಿನ ನಡೆಯಿತು. ಛಾಯಾಗ್ರಾಹಕ ಮ್ಯಾಥ್ಯೂ ರಾಜನ್ ಮೇಲಿನ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಚಿತ್ರೀಕರಣದಲ್ಲಿ ಗಾಯಗೊಂಡಿರುವ ನಾಯಕ ನಟ ಆದಿತ್ಯ ಈಗ ಸುಧಾರಿಸಿಕೊಳ್ಳುತ್ತಿದ್ದು, ಅವರು ಬಂದ ನಂತರ ಹಾಡುಗಳು ಹಾಗೂ ಕೆಲವು ಆಕ್ಷನ್ ದೃಷ್ಯಗಳನ್ನು ಚಿತ್ರೀಕರಿಸಲಾಗುವುದೆಂದು ನಿರ್ಮಾಪಕ ಎಂ. ಮಂಜುನಾಥ್ ತಿಳಿಸಿದ್ದಾರೆ. ಕೆಕೆ ಫಿಲಂಸ್ ಲಾಂಛನದಲ್ಲಿ ಜಿಎನ್ ಮೂರ್ತಿ ಅರ್ಪಿಸಿಎಂ ಪುಟ್ಟಸ್ವಾಮಿ ಹಾಗೂ ಕೆವಿ ರಾಜು ಸಹ ನಿರ್ಮಾಪಕರಾಗಿದ್ದಾರೆ.

ಡೆಡ್ಲಿ ಸೋಮ ಸತ್ತ ನಂತರದ ಕಥೆ ಇದು. ಆ ಚಿತ್ರದ ಒಂದು ಸಣ್ಣ ಎಳೆಯನ್ನಿಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ ಎಂದು ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದಾರೆ. ಕೆಡಿ ವೆಂಕಟೇಶ್ ಸಾಹಸ ಸಂಯೋಜನೆ, ಜೋನಿಹರ್ಷರ ಸಂಗೀತ ಸಂಯೋಜನೆ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada