For Quick Alerts
  ALLOW NOTIFICATIONS  
  For Daily Alerts

  ಮರುಹುಟ್ಟು ಪಡೆದ ಶಂಕರನಾಗ್ ಚಿತ್ರಮಂದಿರ

  By Staff
  |
  ಬೆಂಗಳೂರಿನ ಹಳೆಯ ಚಿತ್ರಮಂದಿರಗಳಲ್ಲಿ ಶಂಕರ್ ನಾಗ್ ಚಿತ್ರಮಂದಿರಕ್ಕೆ ಒಂದು ವಿಶೇಷ ಸ್ಥಾನವಿದೆ. ಎಂಜಿ ರಸ್ತೆಯಲ್ಲಿ ಸಂಚರಿಸುವವರಿಗೆ ಆ ಚಿತ್ರಮಂದಿರ ಒಂದಲ್ಲ ಒಂದು ಕಾರಣಕ್ಕೆ ಗಮನಸೆಳೆಯುತ್ತಿತ್ತು. ಶಂಕರನಾಗ್ ಚಿತ್ರಮಂದಿರ ಎಂದರೆ ಬಹಳಷ್ಟು ಮಂದಿಗೆ ತಕ್ಷಣ ಹೊಳೆಯುವುದಿಲ್ಲ. ಅದನ್ನು ಏನಿದ್ದರೂ ಸಿಂಫೋನಿ ಸಿನೆಮಾ ಎಂದು ಕರೆದರೇನೇ ಬಹಳಷ್ಟು ಮಂದಿಗೆ ಮನದಟ್ಟಾಗುವುದು.

  ಇಷ್ಟುದಿನಗಳ ಕಾಲ ಚಿತ್ರ ಪ್ರದರ್ಶನವಿಲ್ಲದೆ ಶಂಕರನಾಗ್ ಚಿತ್ರಮಂದಿರ ಬಿಕೋ ಎನ್ನುತ್ತಿತ್ತು. ಈಗ ಜೀರ್ಣೋದ್ಧಾರ ಕಾರ್ಯ ಮುಗಿಸಿಕೊಂಡು ನವಮನ್ಮಥನಂತೆ ಕಂಗೊಳಿಸುತ್ತಿದೆ. ಹೊಸವರ್ಷ ಯುಗಾದಿಯಿಂದ(ಮಾರ್ಚ್ 27) ಚಿತ್ರ ಪ್ರದರ್ಶನಕ್ಕೆ ಅಣಿಯಾಗಿದೆ. ಹಾಗಾಗಿ ಎಂಜಿ ರಸ್ತೆಗೆ ಮತ್ತಷ್ಟು ಒಯ್ಯಾರ!

  ಶಂಕರನಾಗ್ ಚಿತ್ರಮಂದಿರ ಆರಂಭವಾಗಿದ್ದು ಎಪ್ಪತ್ತರ ದಶಕ ಕೊನೆಯಲ್ಲಿ(1979). ಉದಯ ಕುಮಾರ್ ನಟನೆಯ 'ಮಧುರ ಸಂಗಮ' ಚಿತ್ರದ ಮೂಲಕ. ಎಂಜಿ ರಸ್ತೆಯ ತವಕ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತೆ ನಂತರ ವರ್ಷಗಳಲ್ಲಿ ಇಲ್ಲಿ ಹೆಚ್ಚಾಗಿ ಆಂಗ್ಲ ಚಿತ್ರಗಳೇ ಪ್ರದರ್ಶನ ಕಂಡವು. ಬಹುಭಾಷಾ ಚಿತ್ರಗಳನ್ನು ಪ್ರದರ್ಶಿಸಿದ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

  ಈಗ ಅತ್ಯಾಧುನಿಕ ಧ್ವನಿ, ಬೆಳಕಿನ ತಂತ್ರಜ್ಞಾನದೊಂದಿಗೆ ಶಂಕರನಾಗ್ ಚಿತ್ರಮಂದಿರ ಸಿದ್ಧವಾಗಿದೆ. 612 ಆಸನ ವ್ಯವಸ್ಥೆಗಳನ್ನು ಹೊಂದಿದೆ. ಎಂ ಜಿ ರಸ್ತೆಯ ಪ್ರೇಮಿಗಳಿಗೆ, ಚಿತ್ರರಸಿಕರಿಗೆ ಏನು ಬೇಕೊ ಎಲ್ಲ ಸೌಲಭ್ಯಗಳು ಅಲ್ಲಿ ಲಭ್ಯ. ಬಹಳಷ್ಟು ಚಿತ್ರಮಂದಿರಗಳು ಮಲ್ಟಿಫೆಕ್ಸ್ ಗಳಾಗಿ ಬದಲಾಗುತ್ತಿದ್ದರೆ, ಶಂಕರನಾಗ್ ಚಿತ್ರಮಂದಿರ ಮಾತ್ರ ತನ್ನ ಹಳೆಯ ರೂಪವನ್ನು ಉಳಿಸಿಕೊಂಡಿರುವುದು ವಿಶೇಷ.

  ಡಾ.ರಾಜ್ ಕುಮಾರ್, ಶಂಕರನಾಗ್, ಅಂಬಿಕಾ ಮತ್ತು ವಜ್ರಮುನಿ ನಟಿಸಿದ್ದ ಕನ್ನಡದ 'ಅಪೂರ್ವ ಸಂಗಮ' ಚಿತ್ರದ ಮೂಲಕ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಎಂಜಿ ರಸ್ತೆ ಕಡೆ ಏನಾದರೂ ಪಾದ ಬೆಳೆಸಿದರೆ ಬೆಂಗಳೂರಿನ ಈ ಹಳೆ ಪಳೆಯುಳಿಕೆ ಹೊಸದಾಗಿರುವುದನ್ನು ಒಮ್ಮೆ ತಪ್ಪದೆ ನೋಡಿ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  ಇದನ್ನೂ ಓದಿ
  ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
  ಗೀತಾ ಚಿತ್ರದ ಜೊತೆಜೊತೆಯಲಿ ಹಾಡು
  ಶಂಕರನಾಗ್ ಹೋಗಿ ಇಂದಿಗೆ ಹದಿನೇಳು ವರ್ಷ?
  ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ
  ಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X