For Quick Alerts
  ALLOW NOTIFICATIONS  
  For Daily Alerts

  ಆನಂದ್ ಬಿಡುಗಡೆ ದಿನವೇ ತೆರೆಗೆ ಶಿವಣ್ಣನ ಶಿವ

  |

  ಶಿವರಾಜ್ ಕುಮಾರ್, ಸುಧಾರಾಣಿಯೊಂದಿಗೆ ಜೋಡಿಯಾಗಿ ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ನಟನಾಗಿ ಪಾದಾರ್ಪಣೆ ಮಾಡಿದ ಚಿತ್ರ ಆನಂದ್. ಇದು ಬಿಡುಗಡೆಯಾಗಿದ್ದು 1986ರ ಜೂನ್ 16ರಂದು. ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತವಿತ್ತು. ಸುಮಾರು 250 ದಿನ ಓಡಿದ್ದ 'ಆನಂದ್' ಚಿತ್ರ, ಆ ಕಾಲದಲ್ಲಿ ದಾಖಲೆ ನಿರ್ಮಿಸಿತ್ತು.

  ನಂತರ ಶಿವರಾಜ್ ಕುಮಾರ್ ಅಭಿನಯದ 'ರಥಸಪ್ತಮಿ' ಹಾಗೂ 'ಮನಮೆಚ್ಚಿದ ಹುಡುಗಿ' ಚಿತ್ರಗಳೂ ಸಾಲಾಗಿ ಗೆದ್ದು ಶಿವಣ್ಣರಿಗೆ 'ಹ್ಯಾಟ್ರಿಕ್ ಹೀರೋ' ಬಿರುದು ಲಭಿಸಿದೆ. ಈಗ ಆ ದಾಖಲೆಯನ್ನು ನೆನಪಿಸಿಕೊಂಡು 'ಶಿವ' ಚಿತ್ರದ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ 'ಮೈಲಾರಿ' ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್. ಅವರೀಗ ಶಿವಣ್ಣ-ಗೀತಾ ಮದುವೆಯ 26ನೇ ವಾರ್ಷಿಕೋತ್ಸವದ ದಿನದಂದು (ಮೇ 19) ಆಡಿಯೋ ಬಿಡುಗಡೆಗೆ ಕೂಡ ಸಿದ್ಧತೆ ನಡೆಸಿದ್ದಾರೆ.

  ಓಂಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿ ರಾಗಿಣಿ ದ್ವಿವೇದಿ. ಸ್ವಲ್ಪ ಶೂಟಿಂಗ್ ಹಾಗೂ ಪೋಸ್ಟ್ ಪ್ರಾಡಕ್ಷನ್ ಕೆಲಸ ಬಾಕಿಯಿರುವ ಶಿವವನ್ನು ಜೂನ್ ಹದಿನಾರರಂದೇ ತೆರೆಗೆ ತರಲು ಯೋಚಿಸಿರುವ ಶ್ರೀಕಾಂತ್ ಯೋಜನೆ ಫಲಪ್ರದವಾಗುವ ಸಂಭವ ಹೆಚ್ಚಿದೆ ಎನ್ನಲಾಗುತ್ತಿದೆ.

  'ಎಕೆ 47' ನಂತರ ಶಿವಣ್ಣ, ಓಂಪ್ರಕಾಶ್ ರಾವ್ ಸಂಗಮದಲ್ಲಿ ಬೇರೆ ಯಾವುದೇ ಚಿತ್ರ ಬಂದಿಲ್ಲ. ಹೀಗಾಗಿ 'ಶಿವ'ದ ಬಗ್ಗೆ ಸ್ವತಃ ಶಿವಣ್ಣ ಹಾಗೂ ಅವರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಕಥೆ ಕೂಡ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎನ್ನಲಾಗಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾದ ಟ್ರೇಲರ್ ಮೂಲಕ ಶಿವಣ್ಣನ ಪಾತ್ರ ವಿಭಿನ್ನ ಎಂಬುದು ಗೋಚರಿಸುತ್ತಿದೆ. ಒಟ್ಟಿನಲ್ಲಿ ಶಿವಣ್ಣನ ಅಭಿಮಾನಿಗಳು ಜೂನ್ 16ಕ್ಕೆ ಕಾಯುವಂತಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Shivrajkumar's upcoming movie 'Shive' is going to release June 16th 2012. It is date, which is Shivrajkumar's first movie 'Anand' Released in 16th June, 1986. Shiva producer K P Srikanth decided to release that date only.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X