»   »  ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ

ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ

Posted By:
Subscribe to Filmibeat Kannada
Ambari moves towards hundred days
ನಟ ಯೋಗೀಶರನ್ನು ಇನ್ನು ಮುಂದೆ 'ಲೂಸ್ ಮಾದ' ಎಂದು ಕರೆದರೆ ತಪ್ಪಾಗುತ್ತೇನೊ!? ಕಾರಣ ಈಗ ಕನ್ನಡ ಚಿತ್ರೋದ್ಯಮದ 'ಅಂಬಾರಿ' ಮೇಲೆ ಕುಳಿತ ನಾಯಕ ಆತ. ದುನಿಯಾ ಚಿತ್ರದ ನಿರ್ಮಾಪಕ ಟಿ.ಪಿ.ಸಿದ್ಧರಾಜು ತಮ್ಮ ಮಗನನ್ನು ಹೀರೋ ಮಾಡಬೇಕು ಎಂದು ಅದ್ಯಾಕೆ ಕನಸು ಕಂಡರೋ ಗೊತ್ತಿಲ್ಲ. ಇಂದು ಅವರ ಕನಸು ನನಸಾಗಿದೆ. 'ಅಂಬಾರಿ' ಚಿತ್ರ ಐವತ್ತು ದಿನಗಳನ್ನು ಪೂರೈಸಿದ್ದು ಶತಕದತ್ತ ಓಟ ಆರಂಭಿಸಿದೆ.

ದುನಿಯಾ ಚಿತ್ರದಲೂಸ್ ಮಾದ ಎಂಬ ಸಣ್ಣ ಪಾತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಯೋಗೀಶ್, ನಂದ ನಂದಿತಾ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬದಲಾದರು. ನಂದ ನಂದಿತಾ ಚಿತ್ರ ಬಿಡುಗಡೆಯಾದಾಗ, ಅಯ್ಯೋ ಯಾರು ನೋಡ್ತಾರ್ರಿ ಈ ಮುಸುಡಿನಾ? ಅಂದವರೇ ಹೆಚ್ಚು. ದಿನದಿಂದ ದಿನಕ್ಕೆ ನಂದ ನಂದಿತಾ ಬಾಕ್ಸಾಫೀಸ್ ಗಳಿಕೆಯಲ್ಲಿ ಸದ್ದು ಮಾಡುತ್ತಿರುವುದನ್ನು ಕಂಡು ಗಾಂಧಿನಗರ ದಂಗಾಯಿತು. ಅದೇಗೋ ನಂದಾ ನಂದಿತಾ ಹಿಟ್ಟಾಯಿತು ಮುಂದಿನ ಸಿನಿಮಾ ಓಡಬೇಕಲ್ವಾ? ಎಂದವರು ಕಡಿಮೆ ಇಲ್ಲ! ನಂತರ ಅಂಬಾರಿ ಮಾಡಿದ ಮೋಡಿಗೆ ಎಲ್ಲರೂ ಮೂಕರಾದರು.

ಯೋಗೀಶ್ ಅಭಿನಯದ 'ಯೋಗಿ' ಚಿತ್ರ ಏಪ್ರಿಲ್ ನಲ್ಲಿ ದಾಂಗುಡಿ ಇಡಲಿದೆ. ಯೋಗೇಶ್ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಅತಿರಥ ಮಹಾರಥ ನಟರು ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ. 'ರಾವಣ' ಚಿತ್ರ ಟಾಕಿ ಕೆಲಸ ಮುಗಿಸಿಕೊಂಡಿದೆ. 'ಪ್ರೀತ್ಸೆ ಪ್ರೀತ್ಸೆ' ಚಿತ್ರ ನಿರ್ಮಾಣ ನಂತರದ ಕೆಲಸಗಳಲ್ಲಿದೆ. ಪುಂಡ, ಪಡ್ಡೆ ಹುಡುಗ ಚಿತ್ರಗಳು ಸೆಟ್ಟೇರಲು ಅಣಿಯಾಗಿವೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ನಟಿಸಿರುವ ಎಲ್ಲ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಲಿವೆಯಂತೆ. ಆ ಎಲ್ಲ ಚಿತ್ರಗಳ ನಾಯಕ ಯೋಗೀಶನೇ.

ನಂದ ನಂದಿತಾ ಚಿತ್ರದಲ್ಲಿನ ಸ್ಲಂ ಹುಡುಗನ ಪಾತ್ರ ಪೋಷಣೆಗೆ ಏನಿಲ್ಲಾ ಅಂದ್ರು 30 ಕ್ಕೂ ಹೆಚ್ಚು ಕೊಳೆಗೇರಿ ಯುವಕರನ್ನು ಭೇಟಿ ಮಾಡಿದ್ದೇನೆ. ಅವರ ಮನಸ್ಥಿತಿಯನ್ನು ಅರಿಯಲು ಪ್ರಯತ್ನಿಸಿದ್ದೇನೆ. ಹಾಗಾಗಿ ಆ ಚಿತ್ರ ಅಷ್ಟು ಅಚ್ಚುಕಟ್ಟಾಗಿ ಬಂತು ಎನ್ನುತ್ತಾರೆ ಯೋಗೀಶ್. ಅಂಬಾರಿ ಚಿತ್ರದ ಮೋಚಿ ಪಾತ್ರಕ್ಕೆ ಎರಡು ತಿಂಗಳ ಕಾಲ ಚಮ್ಮಾರನಾಗಿ ಕೆಲಸ ಮಾಡಿದ್ದೇನೆ. ಆಗಲೇ ನನಗೆ ಗೊತ್ತಾಗಿದ್ದು ಆ ಪಾತ್ರದ ಆಳ, ಅಗಲ ವಿಸ್ತಾರಗಳು ಎಂಬುದು ಯೋಗೀಶ್ ವಿವರಣೆ.

ಅಂದಹಾಗೆ ಯೋಗೀಶನ ಬಹಳಷ್ಟು ಅಭಿಮಾನಿಗಳು ಹುಡುಗರಂತೆ. ಅದ್ಯಾಕೋ ಏನೋ ಹುಡುಗಿಯರಿಂದ ಒಂದೇ ಒಂದು ದೂರವಾಣಿ ಕರೆ ಬಂದಿಲ್ಲವಂತೆ. ಬಹುಶಃ ಅವರ ಮನಸ್ಸಿನಲ್ಲಿ ಲೂಸ್ ಮಾದನ ಪಾತ್ರ ಇನ್ನೂ ಅಚ್ಚಳಿಯದೇ ಉಳಿದಿರಬೇಕು! ನಿಧಾನಕ್ಕಾದರೂ ಬೆಂಗಳೂರು ಕೆಜಿ ರಸ್ತೆಯ ಸಾಗರ್ ಚಿತ್ರಮಂದಿರದ ಕಡೆಗೆ 'ಅಂಬಾರಿ' ನೋಡಲು ಹುಡುಗಿಯರು ಹೆಜ್ಜೆಹಾಕುತ್ತ್ತಿರುವುದು ಸುಳ್ಳಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೈಕಲ್ ಮೇಲೆ ಅಂಬಾರಿ ಹೊತ್ತ ಯೋಗೀಶ್!
ಚಿತ್ರವಿಮರ್ಶೆ: ನಂದಾ ಲವ್ಸ್ ನಂದಿತಾ
ದುನಿಯಾದ 'ಲೂಸ್ ಮಾದನ' ಬಗ್ಗೆ ಒಂದಿಷ್ಟು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada