»   »  ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?

ಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?

Posted By:
Subscribe to Filmibeat Kannada
ಕನ್ನಡ ಚಿತ್ರರಂಗಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೂ ಎಣ್ಣೆ ಸೀಗೇಕಾಯಿ. ಸೂಕ್ತ ತಾರೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಪರದಾಡುತ್ತಿದೆ. ತಾರೆಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ ಮಂಡ್ಯ ಜನಕ್ಕೆ ಒಳ್ಳೆ ಮನರಂಜನೆ ಒದಗಿಸುತ್ತಿದೆ ಕಾಂಗ್ರೆಸ್ ಪಕ್ಷ . ಆ ನಟನನ್ನು ಕಣಕ್ಕಿಳಿಸುತ್ತೇವೆ ಈ ನಟನನ್ನು ಅಖಾಡಕ್ಕೆ ತಳ್ಳುತ್ತೇವೆ ಎಂದುಮಂಡ್ಯ ಜನಕ್ಕೆ ಕಾಂಗ್ರೆಸ್ ಶಾಖ್ ನೀಡುತ್ತಿದೆ. ಈ ಶಾಖ್ ಗಳಿಂದ ಅವರು ಚೇತರಿಸಿಕೊಳ್ಳುತ್ತಿರುವಾಗಲೇ ನಟಿ ರಮ್ಯಾರನ್ನು ಕಣಕ್ಕಿಳಿಸುವುದಾಗಿ ಹೇಳಿ ಕಾಂಗ್ರೆಸ್ ಮತ್ತೊಂದು ಶಾಖ್ ನೀಡಿದೆ.

ನಟಿ ರಮ್ಯಾ ಅವರ ತಾಯಿ ರಂಜಿತಾ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರನ್ನು ಭೇಟಿ ಮಾಡಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ತಮ್ಮ ಆಸೆಯನ್ನು ದೇಶಪಾಂಡೆ ಅವರೊಂದಿಗೆ ತೋಡಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ರಂಜಿತಾ ಅವರಿಗೆ ಬದಲಾಗಿ ಅವರ ಮಗಳು ರಮ್ಯಾರನ್ನು ಕಣಕ್ಕಿಳಿಸಿದರೆ ಹೇಗೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಈ ವಿಚಾರವನ್ನು ಶೀಘ್ರದಲ್ಲೇ ಕಾಂಗ್ರೆಸ್ ಹೈಕಮಾಂಡ್ ಕಿವಿಗೆ ಹಾಕಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿ ಎಂದು ತಮ್ಮನ್ನು ಯಾರೂ ಇನ್ನೂ ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಜನಸೇವೆ ಮಾಡಬೇಕು ಎಂಬ ಆಸೆ ನನಗೂ ಇದೆ. ಅದರಲ್ಲೂ ಮಂಡ್ಯಜನರೊಂದಿಗೆ ಬೆರೆಯಬೇಕು, ಅವರ ಸೇವೆ ಮಾಡಬೇಕು ಎಂಬ ಹಂಬಲವೂ ಇದೆ ಎಂದು ರಮ್ಯಾ ಹೇಳಿದ್ದಾರೆ. ನಮ್ಮ ತಾಯಿ ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತೆ. ಅವರಿಗೆ ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದರೆ ತಾವು ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಟಿಕೆಟ್ ಪೀಕಲಾಟದಲ್ಲಿ ಮಂಡ್ಯ ಜನ ಹೈರಾಣಾಗಿದ್ದಾರೆ. ರಮ್ಯಾ ಅವರಿಗಾದರೂ ಕಾಂಗ್ರೆಸ್ ಟಿಕೆಟ್ ಸಿಗಲಿ ಎಂದು ಬಯಸೋಣವೇ!?

(ದಟ್ಸ್ ಕನ್ನಡ ಚಿತ್ರವಾರ್ತೆ)

ಲೋಕಸಭೆ ಚುನಾವಣೆಗೆ ತಾರೆಗಳ ಸಮರ
ಬಳ್ಳಾರಿ ರೆಡ್ಡಿಗಳ ವಿರುದ್ಧ ನಟ ಸುದೀಪ್ ಸ್ಪರ್ಧೆ!?
ತುಮಕೂರಿನಿಂದ ನಟ ಅಶೋಕ್ ಲೋಕಸಭೆಗೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada