»   » ವರದಾಚಾರ್ ಹಾಲ್‌ನಲ್ಲಿ 'ಬಿಂದಾಸ್ ಹುಡುಗಿ' ನರ್ತನ

ವರದಾಚಾರ್ ಹಾಲ್‌ನಲ್ಲಿ 'ಬಿಂದಾಸ್ ಹುಡುಗಿ' ನರ್ತನ

Posted By:
Subscribe to Filmibeat Kannada

ನಗರದ ಶೇಷಾದ್ರಿಪುರಂನ ವರದಾಚಾರ್ ಸಭಾಂಗಣ ಅಂದು ವಿನೂತನ ರೀತಿಯಲ್ಲಿ ಅಲಂಕೃತವಾಗಿತ್ತು. ಜನರ ಜಂಗುಳಿಯೂ ಅಲ್ಲಿತ್ತು. ಇಂತಹ ವಾತಾವರಣದಲ್ಲಿ 'ಬಿಂದಾಸ್ ಹುಡುಗಿ' ಚಿತ್ರದ ಹಾಡೊಂದರ ಚಿತ್ರೀಕರಣ ನೆರವೇರಿತು. ಕವಿರಾಜ್ ರಚಿಸಿರುವ, ಸೂರಿಸುರೇಶ್(ಹೊಸಗಾನ ಬಜಾನ ಖ್ಯಾತಿ) ಹಾಡಿರುವ 'ಸೋನಾ ಸೋನಾ ಸೋನಾ ಯಾರೋ ನನ್ನ ಸಜ್ಜನ ಜಾನೆ ಜಾನೆ ಯಾರೇ ನೀ ಸಜ್ಜನ... ಎಂಬ ಗೀತೆಗೆ ನಾಯಕಿ ಪ್ರಿಯಾಹಾಸನ್ ಸಹನರ್ತಕರೊಡನೆ ಹೆಜ್ಜೆ ಹಾಕಿದರು.

ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದ ಐದು ವಿವಿಧ ಸೆಟ್‌ಗಳಲ್ಲಿ ಚಿತ್ರೀಕರಣಗೊಂಡ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದರು. ಶ್ರೀ ಪ್ರಿಷ್ಮೋ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗೌರಮ್ಮ ಹಾಗೂ ಮೋಹನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಾಲಕೃಷ್ಣ, ರವಿಕುಮಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಅವರ ಸಹ ನಿರ್ಮಾಣವಿದೆ.

ಆರ್.ಗಿರಿ ಛಾಯಾಗ್ರಹಣ, ಯರಾ ರಮೇಶ್ ಸಂಗೀತ, ಬಾಬು ಸಂಕಲನ, ಕೌರವ ವೆಂಕಟೇಶ್ ಸಾಹಸ, ಬಿ.ಎ.ಮಧು ಸಂಭಾಷಣೆ, ರಾಂ ನಾರಾಯಣ್, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಶೃಂಗೇರಿ ಚಂದ್ರು ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಿಯಾ ಹಾಸನ್, ರವಿಶಂಕರ್, ನೀನಾಸಂ ಅಶ್ವತ್, ಬೇಬಿ ಅನೂಷಾ, ಜಯಂತಿ, ಗಿರಿಜಾ ಲೋಕೇಶ್, ಸುರೇಶ್ ಮಂಗಳೂರು, ಗಣೇಶ್ ರಾವ್, ಮೋಹನ್ ಜುನೇಜ, ಶರಣ್, ಶಂಕರ್ ಅಶ್ವತ್, ಕಮಲ, ಮಿತ್ರ, ರಾಮಮೂರ್ತಿ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada