»   »  ಬೆಳಗಾವಿ ಗಡಿಯಲ್ಲಿ ಕನ್ನಡದ ಬೆಳ್ಳಿ ಬೆಡಗು!

ಬೆಳಗಾವಿ ಗಡಿಯಲ್ಲಿ ಕನ್ನಡದ ಬೆಳ್ಳಿ ಬೆಡಗು!

By: *ರಾಮಚಂದ್ರ, ಬೆಳಗಾವಿ
Subscribe to Filmibeat Kannada
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶುಕ್ರವಾರ 'ಗಡಿ ಕನ್ನಡ ಚಲನ ಚಿತ್ರೋತ್ಸವ'ಕ್ಕೆ ಚಾಲನೆ ನೀಡಲಾಯಿತು. ಉದ್ಘಟನಾ ಸಮಾರಂಭದಲ್ಲಿ ಕೆ ಎಲ್ ಇ ಸೊಸೈಟಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಪ್ರಭಾಕರ ಬಿ ಕೋರೆ ಮಾತನಾಡುತ್ತಾ, ಉತ್ತಮ ಕನ್ನಡಚಿತ್ರಗಳನ್ನು ಪ್ರೋತ್ಸಾಹಿಸಿ ಎಂದು ಕರೆ ಕೊಟ್ಟರು.

ಬೆಳಗಾವಿ ಜಿಲ್ಲೆ ಕನ್ನಡ ಚಿತ್ರೋದ್ಯಮಕ್ಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿದೆ. ಜಿಲ್ಲೆಯಲ್ಲಿ ಹಲವಾರು ಭಾಷಿಕರಿದ್ದರೂ ಹೆಚ್ಚು ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಕನ್ನಡ ಚಿತ್ರೋದ್ಯಮದಿಂದ ಹೆಚ್ಚು ಕಲಾತ್ಮಕ ಚಿತ್ರಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

ಕೆ ಎಲ್ ಇ ಸೊಸೈಟಿಯ ಜೀರಿಗೆ ಸ್ಮಾರಕ ಸಭಾಂಗಣವನ್ನು ಚಲನ ಚಿತ್ರೋತ್ಸವಕ್ಕಾಗಿ ನೀಡಲಾಗಿತ್ತು. ಚಿತ್ರೋತ್ಸವಕ್ಕೆ ಉತ್ತಮ ಐತಿಹಾಸಿಕ ಚಿತ್ರಗಳು ಹಾಗೂ ಉತ್ತಮ ಮಕ್ಕಳ ಚಿತ್ರಗಳನ್ನು ಆಯ್ಕೆ ಮಾಡಿರುವುದಕ್ಕೆ ಸಂಸದ ಸುರೇಶ್ ಸಿ ಅಂಗಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಟಿ ಗಿರಿಜಾ ಲೋಕೇಶ್ ಮಾತನಾಡುತ್ತಾ, ಕಲಾತ್ಮಕ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳನ್ನು ಚಲನಚಿತ್ರೋತ್ಸವಕ್ಕೆ ಹೆಚ್ಚಾಗಿ ಆಯ್ಕೆ ಮಾಡಬೇಕು ಎಂದರು.

ಗಡಿಯಲ್ಲಿ ಈ ವಾರ 56 ಚಿತ್ರಗಳು ಬಿಡುಗಡೆ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada