For Quick Alerts
  ALLOW NOTIFICATIONS  
  For Daily Alerts

  ಐಶೂಗೆ ಒಂದು ಗಂಟೆಗೆ ಸರ್ಕಾರ ಕೊಟ್ಟಿದ್ದು 10 ಲಕ್ಷ

  By Rajendra
  |

  ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಾಲಿವುಡ್ ತಾರೆ ಐಶ್ವರ್ಯ ರೈ ಅವರನ್ನು ಆಹ್ವಾನಿಸಿದ್ದು ನೆನಪಿರಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಈ ವರ್ಣರಂಜಿತ ಸಮಾರಂಭಕ್ಕೆ ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿತ್ತು. ಆದರೆ ಐಶ್ವರ್ಯ ರೈಗೆ ಕೊಟ್ಟದ್ದೆಷ್ಟು?

  ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ಮಾಹಿತಿ ಹೀಗಿದೆ. ಐಶ್ವರ್ಯ ರೈ ಬಂದು ಹೋಗಲು ವಿಮಾನ ಶುಲ್ಕ ಸೇರಿದಂತೆ ಹಾಗೂ ಆಕೆ ಒಂದು ಗಂಟೆ ಕಾಲ ಸಮ್ಮೇಳನದಲ್ಲಿ ಕಳೆಯಲು ರು.10 ಲಕ್ಷ ನೀಡಲಾಗಿದೆ. ಅದೇ ಕನ್ನಡ ಚಿತ್ರರಂಗದ ಕಲಾವಿದರು ಮೂರು ದಿನಗಳ ಕಾಲ ಕುಣಿದು ಕುಪ್ಪಳಿಸಿದ್ದಕ್ಕೆ ಸರ್ಕಾರ ಖರ್ಚು ಮಾಡಿರುವುದು ರು. 7.93 ಲಕ್ಷ.

  ಈ ಎಲ್ಲಾ ಮಾಹಿತಿಯನ್ನು ಸಮಾಜ ಸೇವಕ ಭೀಮಪ್ಪ ಗದಗ ಅವರು ಪಡೆದಿದ್ದಾರೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ, ಸಮಾರಂಭದಲ್ಲಿ 3,000 ಹಾಡುಗಳ ವಿಧವಿಧದ ಆಡಿಯೋಗಳನ್ನು ತಂದಿರುವ ಲಹರಿ ಆಡಿಯೋ ಕಂಪನಿಗೆ ಸರ್ಕಾರ ರು.25 ಲಕ್ಷ ನೀಡಿದೆ. (ಏಜೆನ್ಸೀಸ್)

  English summary
  According to Right to Information Act, Karnataka government spent Rs.10 lakhs for the arrival and departure of Aishwaraya Rai to the second Vishwa Kannada Sammelana held in last year March. This figure is quoted as traveling expenses for one hour presence of the nation's pride has roots from Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X