»   »  ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ

ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ

Subscribe to Filmibeat Kannada
Gururaj Jaggesh makes debut in Gilli
ತಮಿಳಿನ '7/ಜಿ ರೈನ್‌ಬೋ ಕಾಲೋನಿ' ಚಿತ್ರದ ಕನ್ನಡ ಅವತರಿಣಿಕೆ 'ಗಿಲ್ಲಿ' ಚಿತ್ರಕ್ಕೆ ಜಗ್ಗೇಶ್ ಮಗ ಗುರುರಾಜ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾತ್ತಿದ್ದಾರೆ. ಫೆಬ್ರವರಿ 5 ರಂದು ಗಿಲ್ಲಿ ಚಿತ್ರ ಸೆಟ್ಟೇರಲಿದೆ. ಶಿವರಾಜ್ ಕುಮಾರ್ ಅಭಿನಯದ ಸತ್ಯ ಇನ್ ಲವ್ ಚಿತ್ರದ ನಿರ್ದೇಶಕ ರಾಘವ ಲೋಕಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಅಣಜಿ ನಾಗರಾಜ್ ಸೇರಿದಂತೆ ಮೂರೂ ಜನ ಒಟ್ಟಾಗಿ ನಿರ್ಮಿಸಲಿರುವ ಈ ಚಿತ್ರಕ್ಕೆ ತಮಿಳಿನ ಯುವಾನ್ ಶಂಕರ್ ರಾಜ್ ಅವರ ಸಂಗೀತ, ಕೃಷ್ಣ ಅವರ ಛಾಯಾಗ್ರಹಣವಿದೆ. ತಮಿಳಿನಲ್ಲಿ ಎ.ಎಂ.ರತ್ನಂರ ನಿರ್ಮಾಣದಲ್ಲಿ '7/ಜಿ ರೈನ್ ಬೋ ಕಾಲೋನಿ' ಎಂಬ ಚಿತ್ರ ಬಂತು. ಆ ಚಿತ್ರ ಬಾಕ್ಸಾಫೀಸ್ ಸಲ್ಲಿ ಗೆದ್ದಿತ್ತು. ಅದನ್ನೇ ತೆಲುಗಿನಲ್ಲಿ '7/ಜಿ ಬೃಂದಾವನ್ ಕಾಲೋನಿ' ಎಂದು ರೀಮೇಕ್ ಮಾಡಿದರು. ಅದೂ ಸೂಪರ್ ಹಿಟ್ ಆಯಿತು. ಈಗ ಅಣಜಿ ನಾಗರಾಜ್ ಆ ಚಿತ್ರದ ರೀಮೇಕ್ ಹಕ್ಕು ಖರೀದಿಸಿ, ಆ ಚಿತ್ರಕ್ಕೆ ಜಗ್ಗೇಶ್‌ರ ಮಗನನ್ನು ಹೀರೋ ಮಾಡುತ್ತಿದ್ದಾರೆ.

ಗುರುರಾಜ್ ಜಗ್ಗೇಶ್ ಮುಂಬೈನ ಕಿಶೋರ್ ನಮಿತಾ ಕಪೂರ್ ಸ್ಕೂಲ್ ನಲ್ಲಿ ನಟನೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಜಗ್ಗೇಶ್ ಪುತ್ರ ಅಂದ ಮೇಲೆ ಪ್ರೇಕ್ಷಕರು ಸಹಜವಾಗಿ ನಿರೀಕ್ಷಿಸುವುದು ನವರಸವನ್ನು. ಆದರೆ 'ಗಿಲ್ಲಿ' ಚಿತ್ರದಲ್ಲಿನ ಪಾತ್ರ ಸ್ವಲ್ಪ ಗಂಭೀರ ಅನ್ನಿಸಿದರೂ ಹಾಸ್ಯಕ್ಕೇನು ಬರವಿಲ್ಲ.ಒಟ್ಟಿನಲ್ಲಿ ಜಗ್ಗೇಶ್ ಎಲ್ಲ ತಯಾರಿ ಮಾಡಿಕೊಂಡೇ ತಮ್ಮ ಪುತರತ್ನನನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎದ್ದೇಳು ಮಂಜುನಾಥ ಚಿತ್ರದ ವಿಡಿಯೊ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada