twitter
    For Quick Alerts
    ALLOW NOTIFICATIONS  
    For Daily Alerts

    ಪತ್ರ:ಕನ್ನಡದಲ್ಲಿ ಡಬ್ಬಿಂಗ್ ಗೆ ನನ್ನ ತೀವ್ರ ವಿರೋಧವಿದೆ

    By *ಬಾಲರಾಜ್ ತಂತ್ರಿ
    |

    Balaraj Tantri
    ಈ ಹಿಂದೆ ನಮ್ಮ ಅಂತರ್ಜಾಲದಲ್ಲಿ ಡಬ್ಬಿಂಗ್ ಪರ ಮತ್ತು ವಿರೋಧ ವ್ಯಕ್ತ ಪಡಿಸಿ ಬಹಳಷ್ಟು ಚರ್ಚೆಗಳಾಗಿವೆ. ಕನ್ನಡ ಚಿತ್ರೋದ್ಯಮ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವವರೆಗೂ ಈ ಚರ್ಚೆ ಇದೇ ರೀತಿ ಮುಂದುವರಿಯುತ್ತಲೇ ಇರುತ್ತೆ, ಹಿತಕರ ಮತ್ತು ಚಿತ್ರೋದ್ಯಮದ ಒಳಿತಿಗಾಗಿ ಈ ಚರ್ಚೆ ಹೀಗೆ ಮುಂದುವರಿಯುತ್ತಲೇ ಇರಲಿ. ವೈಯಕ್ತಿಕವಾಗಿ ಕನ್ನಡದಲ್ಲಿ ಡಬ್ಬಿಂಗ್ ನಿಷೇಧಿಸಿದ ಚಿತ್ರೋದ್ಯಮದ ನಿರ್ಧಾರಕ್ಕೆ ನನ್ನ ಸಹಮತವಿದೆ. ಯಾಕೆಂದರೆ...

    ಡಬ್ಬಿಂಗ್ ಜಾರಿಗೆ ಬಂದರೆ ಮೊದಲು ತೊಂದರೆ ಅನುಭವಿಸುವವರು ಚಿತ್ರೋದ್ಯಮವನ್ನೇ ನಂಬಿ ಕೊಂಡಿರುವ ಲಕ್ಷಾಂತರ ಮಂದಿ. ಅದೆಷ್ಟು ಕಲಾವಿದರು, ತಂತ್ರಜ್ಞಾನರು ಕನ್ನಡ ಚಿತ್ರೋದ್ಯಮವನ್ನೇ ನಂಬಿ ಕೊಂಡಿಲ್ಲವೇ? ಅವರ ಹೊಟ್ಟೆ ಪಾಡಿಗೆ ತೊಂದರೆಯಾದರೆ ಪಕ್ಕದ ಆಂಧ್ರ, ತಮಿಳುನಾಡು, ಬಾಲಿವುಡ್ ನವರು ಅಥವಾ ಡಬ್ಬಿಂಗ್ ಇರಬೇಕೆಂದು ಬಯಸವ ನಮ್ಮ ಟೆಕ್ಕಿಯಾದಿ ಸ್ನೇಹಿತರುಗಳು ಅದರ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಯೇ?

    ತಮಿಳುನಾಡಿನಲ್ಲಿ ಹಿಂದಿ ಚಿತ್ರಗಳು ಪ್ರಯಾಸದಿಂದ ಬಿಡುಗಡೆಗೊಳ್ಳುತ್ತಿವೆ. ಬಿಡುಗಡೆಯಾದರೂ ಮಲ್ಟಿಪ್ಲೆಕ್ಸ್‌ಗಳಿಗೆ ಸೀಮಿತ. ಹಾಗಂತ ಹಿಂದಿಯಲ್ಲಿ ಒಳ್ಳೆ ಚಿತ್ರ ಬರುತ್ತಿಲ್ಲವೇ? ಅಥವಾ ಬಿಡುಗಡೆಯಾಗುವ ಎಲ್ಲಾ ತಮಿಳು ಚಿತ್ರಗಳು ಹಿಟ್ ಆಗುತ್ತಿದೆಯಾ? ಇಲ್ಲಾ. ಅದಕ್ಕೆ ಉತ್ತರ ಅವರವರ ಭಾಷೆಯ ಮೇಲಿರುವ ಅವರಿಗಿರುವ ಭಾಷಾ... ಅಭಿಮಾನ ...

    ನಮ್ಮ ಕೆಲ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿದೆ, ಆ ಚಿತ್ರೋದ್ಯಮಕ್ಕೆ ಡಬ್ಬಿಂಗ್ ತಡೆದುಕೊಳ್ಳುವ ಶಕ್ತಿಯಿದೆ. ಆ ಭಾಷೆಯ ಜನರು ಮೊದಲು ಅವರ ಭಾಷೆಗೆ ಮಣೆ ಹಾಕುತ್ತಾರೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಿನಿಮಾನೇ ಅವರಿಗೆ ಜೀವಾಳ. ಒಂದು ಎವರೇಜ್ ಚಿತ್ರ ಅಲ್ಲಿ ಹಿಟ್ ಆಗುತ್ತೆ, ಕನ್ನಡದಲ್ಲಿ ಒಳ್ಳೆಯ ಚಿತ್ರ ಎವರೇಜ್ ಆಗಿ ಹಿಟ್ ಆಗುತ್ತೆ. ಅಲ್ಲಿ ಹಿಟ್ ಆಗಿರುವ ಚಿತ್ರವನ್ನು ಇಲ್ಲಿಗೆ ರಿಮೇಕ್ ಮಾಡಿದಾಗ ನಾವು ಅಂತ ಚಿತ್ರಕ್ಕೆ ಮಣೆ ಹಾಕುತ್ತೇವೆ.

    ಕನ್ನಡ ಸಿನಿಮಾಗಳು ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಹಿಟ್ ಆಗುವ ಚಿತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ ಎನ್ನುವುದನ್ನು ನಮ್ಮ ಓದುಗರು ಅಂಡರ್ ಲೈನ್ ಮಾಡಿ ಓದಿಕೊಳ್ಳಬೇಕಾಗಿ ಎನ್ನುವುದು ನನ್ನ ಕೋರಿಕೆ.

    ಡಬ್ಬಿಂಗ್ ವಿರೋಧಿಸುವ ನಮ್ಮ ಸ್ನೇಹಿತರು ಹಾಲಿವುಡ್ ರೀತಿಯಲ್ಲಿ ತೆರೆಗೆ ಬಂದಿದ್ದ ಸಾರಥಿ, ಚಿಂಗಾರಿ ಚಿತ್ರವನ್ನು ಎಷ್ಟು ಮಂದಿ ನೋಡಿದ್ದೀರಿ ಎಂದು ಕೇಳಲು ಬಯಸುತ್ತೇನೆ? ಅವನು ಕಪ್ಪು, ಇವನ ಬಾಯಿ ಸರಿಯಿಲ್ಲ, ಅವನು ಹೆಂಡತಿಗೆ ಹೊಡೆದ ಈ ರೀತಿ ಒಂದೊಂದು ನಾಯಕನ ಚಿತ್ರವನ್ನು ದೂರಮಾಡಿ, ಇರೋ ಪುಟ್ಟ ಮಾರುಕಟ್ಟೆಯಲ್ಲಿ ಅಭಿಮಾನಿಗಳೆಂದು ನಮ್ಮ ನಮ್ಮಲ್ಲೇ ಕಾಲೆಳೆದುಕೊಂಡು ಇಂದು ಕನ್ನಡ ಚಿತ್ರಗಳು ಚೆನ್ನಾಗಿ ಬರುತ್ತಿಲ್ಲ ಎನ್ನುವವರಿಗೆ ಏನನ್ನಬೇಕು?

    ಕನ್ನಡದಲ್ಲಿ ಎಲ್ಲಾ ಚಿತ್ರಗಳು ಚೆನ್ನಾಗಿ ಬರುತ್ತಿಲ್ಲ ಒಪ್ಪಿಕೊಳ್ಳೋಣ, ಅದು ಎಲ್ಲಾ ಭಾಷೆಯಲ್ಲಿಯೂ ಇದ್ದಿದ್ದೇ. ತೆಗೆದ ಎಲ್ಲಾ ಚಿತ್ರಗಳು ಹಿಟ್ ಆಗಲು ನಮ್ಮ ಎಲ್ಲಾ ನಿರ್ದೇಶಕರು ಪುಟ್ಟಣ್ಣ ಕಣಗಾಲರು ಆಗಲು ಸಾಧ್ಯವೇ?

    ಡಬ್ಬಿಂಗ್ ನಿಂದ ಇನ್ನೊಂದು ಚಿತ್ರೋದ್ಯಮಕ್ಕೆ ಹೊಡೆತ ಏನಂದರೆ, ಉದಾಹರಣೆಗೆ ತೆಲುಗಿನ ದಮ್ಮು ಚಿತ್ರ ರಾಜ್ಯದ 150 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಒಂದು ವೇಳೆ ಈ ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ಆಯಿತು ಅಂದುಕೊಳ್ಳೋಣ. ಆಗ 150 ಇದ್ದಿದ್ದು 250 ಆಗುವುದಿಲ್ಲವೇ? ಅದೇ ಸಮಯಕ್ಕೆ ಸರಿಯಾಗಿ ತಮಿಳಿನಲ್ಲಿ ಮತ್ತು ಹಿಂದಿಯಲ್ಲಿ ಬಿಗ್ ಬಜೆಟ್ ಚಿತ್ರ ಬಿಡುಗಡೆಯಾದರೆ ಆ ಚಿತ್ರಗಳು ಇನ್ನೊಂದು 250 ಚಿತ್ರದಲ್ಲಿ ಬಿಡುಗಡೆಯಾದರೆ? ರಾಜ್ಯದಲ್ಲಿ ಇರುವುದು ಹೆಚ್ಚುಕಮ್ಮಿ 600 ಚಿತ್ರಮಂದಿರ ಅದರಲ್ಲಿ 500 ಚಿತ್ರಮಂದಿರ ಡಬ್ಬಿಂಗ್ ಆದ ಬೇರೆ ಭಾಷೆಗಳಿಗೆ ದಾನ ಮಾಡಿದರೆ ಕನ್ನಡ ಚಿತ್ರಗಳು ಮತ್ತು ಅದನ್ನು ನಂಬಿಕೊಂಡವರು ಏನು ಮಣ್ಣು ತಿನ್ನಬೇಕಾ ಸ್ವಾಮಿ ?

    ಹೇಗೂ ಮೊದಲು ಹಿಂದಿ, ತೆಲುಗು, ತಮಿಳಿನ ನಂತರವಲ್ಲವೇ ಹೆಚ್ಚಿನ ನಮ್ಮವರು ಕನ್ನಡ ಚಿತ್ರ ನೋಡುವುದು? ಪರಿಸ್ಥಿತಿ ಹಾಗೆ ಮುಂದುವರಿಯಲಿ. ಡಬ್ಬಿಂಗ್ ಯಾಕೆ ಬೇಕು? ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲಿ ಪೊಂಗಲ್ ಸಂಕ್ರಾಂತಿ ಆಚರಿಸುವ ರೀತಿ ಬೇರೆ ಬೇರೆ ಇರಲ್ವೆ? ಕರ್ನಾಟಕ, ಆಂಧ್ರದಲ್ಲಿ ಯುಗಾದಿ ಹಬ್ಬ ಆಚರಿಸುವ ರೀತಿ ಬೇರೆ ಬೇರೆ ಇರಲ್ವೆ? ತೆಲುಗು, ತಮಿಳು ಚಿತ್ರಗಳನ್ನು ಡಬ್ಬಿಂಗ್ ಮಾಡಿದರೆ ನಮ್ಮ ಮಣ್ಣಿನ, ಭಾಷೆಯ, ಸಂಸ್ಕೃತಿಯ ಅನುಸಾರ ಚಿತ್ರ ತೆಗೆಯುತ್ತಾರೆಯೇ?

    ನಮ್ಮ ಚಿತ್ರಗಳನ್ನು ಬೇರೆ ಭಾಷೆಯವರು ಮೆಚ್ಚುವಂತಾಗ ಬೇಕು. ಅದು ಯಾರಿಂದ ಸಾಧ್ಯ, ನಮ್ಮಿಂದಲೇ. ನಮ್ಮ ಚಿತ್ರರಂಗವನ್ನು ಮೊದಲು ಉಳಿಸಿಕೊಳ್ಳೋಣ ಸ್ನೇಹಿತರೇ , ಆಮೇಲೆ ಅಮೀರ್ ಖಾನ್ ವಿಚಾರಕ್ಕೋ, ಬೇರೆ ವಿಚಾರಕ್ಕೋ ಹೋಗೋಣ.

    English summary
    Dubbing other language movies to Kannada will have lot of ill effects on Kannada language and culture. Hence, any attempts to dub the movies should be opposed vehemently. Argues Balaraj Tantri who dislikes dubbing culture tooth and nail.
    Thursday, May 3, 2012, 21:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X