For Quick Alerts
  ALLOW NOTIFICATIONS  
  For Daily Alerts

  ಡಿಂಗ್ ಡಾಂಗ್ ಡ್ಯಾನ್ಸ್‌ಗೆ ನೋ ಎಂದ ಇಲಿಯಾನಾ

  By Rajendra
  |

  ಈಗ ಏನಿದ್ದರೂ ಡಿಂಗ್ ಡಾಂಗ್ ಸಾಂಗ್‌ಗಳದ್ದೇ ಹವಾ. ಬಾಲಿವುಡ್‌ನಿಂದ ಗಾಂಧಿನಗರದ ತನಕ ಐಟಂ ಸಾಂಗ್‌ಗಳದ್ದೇ ಕಾರುಬಾರು. ಆದರೆ ಇಲಿಯಾನಾ ಮಾತ್ರ ಈ ರೀತಿಯ ಡಿಂಗ್ ಡಾಂಗ್ ಐಟಂ ಸಾಂಗನ್ನು ಒಲ್ಲೆ ಎಂದಿದ್ದಾರೆ. ಹಿಂದಿಯ 'ದಬಾಂಗ್' ಚಿತ್ರದ ತೆಲುಗು ರೀಮೇಕ್‌ನಲ್ಲಿ ಇಲಿಯಾನಾಗೆ ಐಟಂ ಸಾಂಗ್ ಆಫರ್ ನೀಡಲಾಗಿತ್ತು.

  'ದಬಾಂಗ್' ಚಿತ್ರದ "ಮುನ್ನಿ ಬದ್ನಾಮ್ ಹುಯಿ ಡಾರ್ಲಿಂಗ್ ತೇರೆ ಲಿಯೆ..." (ಡಾರ್ಲಿಂಗ್ ನಿನಗಾಗಿ ನನ್ನ ಹೆಸರು ಕೆಡಿಸಿಕೊಳ್ತೀನಿ...) ಹಾಡನ್ನು ತೆಲುಗು ರೀಮೇಕ್‌ನಲ್ಲೂ ಬಳಸಿಕೊಳ್ಳಲಾಗುತ್ತಿದೆ. ಆದರೆ ಇಲಿಯಾನಾ ಮಾತ್ರ ಈ ಹಾಡಿಗೆ ಸೊಂಟ ಕುಣಿಸಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ 'ಗಬ್ಬರ್ ಸಿಂಗ್' ಎಂದು ಹೆಸರಿಡಲಾಗಿದೆ. ಶ್ರುತಿ ಹಾಸನ್ ಚಿತ್ರದ ನಾಯಕಿ.

  ಈ ಚಿತ್ರದ ಐಟಂ ಸಾಂಗ್‌ಗೆ ಇಲಿಯಾನಾಗೆ ಮೂರು ದಿನಗಳ ಕಾಲ್‌ಶೀಟ್‌ಗೆ ರು.80 ಲಕ್ಷಕ್ಕೆ ಮಾತುಕತೆಯಾಗಿತ್ತು. ಆದರೆ ಈ ಆಫರನ್ನು ಇಲಿಯಾನಾ ನಯವಾಗಿ ನಿರಾಕರಿಸಿದ್ದಾರೆ. ಇದಕ್ಕೂ ಮುನ್ನ ಬಿಪಾಶಾ ಬಸು ಅವರನ್ನು ಐಟಂ ಸಾಂಗ್‌ಗೆ ಕೇಳಲಾಗಿತ್ತು. ಬಿಪಾಶಾ ಒಂದು ಕೋಟಿ ಕೇಳಿ ನಿರ್ಮಾಪಕರನ್ನು ಬೆಚ್ಚಿಬೀಳಿಸಿದ್ದಳು. (ಏಜೆನ್ಸೀಸ್)

  English summary
  Actress Ileana D'Cruz says no to item song in the Telugu movie Gabbar Singh. As per the reports the makers offered RS 80 lakhs to Ileana for 3 days call sheets, even though she sweetly turned down the offer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X