»   » ಜ.7 ರಿಂದ 13 ರ ವರೆಗೆ ಮಕ್ಕಳ ಚಿತ್ರೋತ್ಸವ

ಜ.7 ರಿಂದ 13 ರ ವರೆಗೆ ಮಕ್ಕಳ ಚಿತ್ರೋತ್ಸವ

Posted By:
Subscribe to Filmibeat Kannada

ಬೆಂಗಳೂರು, ಜ. 3 : 6ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಜನವರಿ 7 ರಿಂದ 13 ರ ವರಗೆ ನಗರದ ನಾನಾ ಕಡೆ ನಡೆಯಲಿದೆ. ಜನವರಿ 7 ರಂದು ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು.

ಜ.8 ರಿಂದ 13 ವರಗೆ ಪ್ರತಿದಿನ ಬಾಲಭವನ ಮತ್ತು ಮೂವಿಲ್ಯಾಂಡ್ ನಲ್ಲಿ ಬೆಳಗ್ಗೆ 10, 12 ಹಾಗೂ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ನವರಂಗ್ ನಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಚಿಲ್ಡ್ರನ್ಸ್ ಇಂಡಿಯಾ ಅಂತಾರಾಷ್ಟ್ರೀಯ ಮಕ್ಕಳ ಮಹೋತ್ಸವದ ಅಧ್ಯಕ್ಷ ಎನ್ ಆರ್ ನಂಜುಂಡೇಗೌಡ ತಿಳಿಸಿದರು. 18 ದೇಶಗಳ ಚಿತ್ರಗಳ ಪ್ರದರ್ಶನಗೊಳ್ಳಲಿದೆ. ಹೀಗಾಗಿ ದೇಶ ವಿದೇಶಗಳಿಂದ ಅನೇಕ ಕಲಾವಿದರು ಮತ್ತು ನಿರ್ಮಾಪಕ ಮತ್ತು ನಿರ್ದೇಶಕರು ಭಾಗವಹಿಸುವರು. ಅದರಲ್ಲೂ ಚೀನಾದ 11 ಚಿತ್ರಗಳ ಪ್ರದರ್ಶನವನ್ನು ಮೂವಿಲ್ಯಾಂಡ್ ನಲ್ಲಿ 'ಚೈನಾ ಫೆಸ್ಟಿವಲ್' ಶೀರ್ಷಿಕೆಯಡಿ ಪ್ರದರ್ಶನಗೊಳ್ಳುವುದು.

ಉತ್ಸವದಲ್ಲಿ 37 ವಿದೇಶಿ, 10 ಭಾರತೀಯ ಚಿತ್ರಗಳು ಹಾಗೂ 13 ಪರಿಸರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜ.11 ರಿಂದ ಬೆಳಗಾವಿ, ಹುಬ್ಬಳ್ಳಿ, ಮೈಸೂರು. ಮಂಡ್ಯಗಳಲ್ಲೂ ಚಲನಚಿತ್ರ ಉತ್ಸವಗಳು ನಡೆಯಲಿವೆ ಎಂದರು. ಜ.8 ಮತ್ತು 9 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಗೆ ಯುವನಿಕಾದಲ್ಲಿ ಮಕ್ಕಳಿಗಾಗಿ ಉಚಿತ ಅನಿಮೇಷನ್ ಕಾರ್ಯಾಗಾರ ಏರ್ಪಡಿಸಲಾಗಿದೆ. 9 ರಿಂದ 13ರ ವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಪರಿಸರ ಚಿತ್ರಗಳು ಪ್ರದರ್ಶನವಿದೆ.

ಜ.10 ರಂದು ಮಕ್ಕಳ ಚಲನಚಿತ್ರ ಆಂದೋಲನ ಹಾಗೂ ಜ.11 ರಂದು ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಕುರಿತು ಯುವನಿಕಾದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಜ.13 ರಂದು ಮಧ್ಯಾಹ್ನ 3 ಗಂಟೆಗೆ ಬಾಲಭವನದಲ್ಲಿ ಸಮಾರೋಪ ನಡೆಯಲಿದೆ. ಅಂದು ವಿದೇಶಿ ಗಣ್ಯರನ್ನು ಸನ್ಮಾನಿಸಲಾಗುವುದು. ಈ ಚಿತ್ರೋತ್ಸವಕ್ಕೆ ನಟ ಉಪೇಂದ್ರ ರಾಯಭಾರಿಯಾಗಿರುತ್ತಾರೆ. ಎಲ್ಲ ಪ್ರದರ್ಶನಗಳಿಗೂ ಪ್ರವೇಶ ಉಚಿತ ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ 94480 86161

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada