»   » ಕಂಠೀರವಕ್ಕೆ ಹೊಸ ನಿರ್ದೇಶಕ ವಿಶುಕುಮಾರ್

ಕಂಠೀರವಕ್ಕೆ ಹೊಸ ನಿರ್ದೇಶಕ ವಿಶುಕುಮಾರ್

Posted By:
Subscribe to Filmibeat Kannada

ಮೇಲಧಿಕಾರಿಗಳ ಒಂದು ತಾಳಕ್ಕೆ ಕುಣಿಯಲೊಪ್ಪದ ವಾರ್ತಾ ಇಲಾಖೆಯ ನಿರ್ದೇಶಕ, ದಕ್ಷ ಅಧಿಕಾರಿ ಎನ್ ಆರ್ ವಿಶುಕುಮಾರ್ ಅವರನ್ನು ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ. ನಿರ್ದೇಶಕ ಹುದ್ದೆಯಿಂದ ಇಂದು ಕೆಳಗಿಳಿದ ವಿಶುಕುಮಾರ್ ನೂತನ ಹುದ್ದೆ ಕಂಠೀರವ ಸ್ಟೂಡಿಯೋದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.

ತೆರವಾದ ವಾರ್ತಾ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ಹೊಸ ನೇಮಕಾತಿ ಆಗುವವರೆಗೆ ಇಲಾಖೆಯ ಹಿರಿಯ ಅಧಿಕಾರಿ ಮಲ್ಲಿಕಾರ್ಜುನ ಕೆಳಗಡೆ ಅವರು ಇನ್ ಛಾರ್ಜ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ.

ಸದ್ಯ ಸಾರಿಗೆ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಭಾಸ್ಕರ್ ರಾವ್, ಐಪಿಎಸ್ ಅಥವಾ ಕೆಎಎಸ್ ಅಧಿಕಾರಿ ಮುದ್ದು ಮೋಹನ್ ಅವರ ಹೆಸರುಗಳು ನಿರ್ದೇಶಕ ಸ್ಥಾನಕ್ಕೆ ಕೇಳಿಬರುತ್ತಿದ್ದು ಅಂತಿಮ ಆಯ್ಕೆಯನ್ನು ವಾರ್ತಾ ಇಲಾಖೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಮುಖ್ಯಮಂತ್ರಿಗಳ ಸಚಿವಾಲಯ ಸದ್ಯದಲ್ಲೇ ನಿರ್ಧರಿಸಲಿದೆ.

Please Wait while comments are loading...