For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ನಟ ಕೋಮಲ್ ಕುಮಾರ್ ಈಗ ರಾಕೆಟ್ ಗೌಡ

  By Rajendra
  |

  ಹಾಸ್ಯ ನಟ ಕೋಮಲ್ ಕುಮಾರ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರಕ್ಕೆ ಅವರು 'ರಾಕೆಟ್ ಗೌಡ' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ನಿರ್ಮಾಣದ ಹೊಣೆಯನ್ನು ಕೋಮಲ್ ಹೊತ್ತಿರುವುದು ವಿಶೇಷ. ಈ ಹಿಂದೆ ಅವರು 'ಕಳ್ ಮಂಜ' ಚಿತ್ರ ನಿರ್ಮಿಸಿ ಗೆದ್ದಿದ್ದರು.

  ರಾಧಿಕನ್ ಗಂಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಮುರುಗನ್ ಈ ಚಿತ್ರದ ನಿರ್ಮಾಪಕರು. ರಾಕೆಟ್ ಗೌಡ ಚಿತ್ರವನ್ನು ಸಂಪೂರ್ಣವಾಗಿ ಜಾರ್ಜಿಯಾದಲ್ಲಿ ಚಿತ್ರೀಕರಿಸಲು ಕೋಮಲ್ ನಿರ್ಧರಿಸಿದ್ದಾರೆ. ಕೋಮಲ್ ಕೈಯಲ್ಲಿ ಈಗ 'ಕರೋಡ್‌ಪತಿ' ಹಾಗೂ 'ಗೋವಿಂದಾಯ ನಮಃ' ಚಿತ್ರ ಸೇರಿದಂತೆ ಹಲವಾರು ಚಿತ್ರಗಳಿಗೆ. ಅವೆಲ್ಲಾ ಮುಗಿದ ಬಳಿಕ ರಾಕೆಟ್ ಗೌಡ ಚಿತ್ರ ಸೆಟ್ಟೇರಲಿದೆ.

  ಏತನ್ಮಧ್ಯೆ ಕೋಮಲ್ ಅವರನ್ನು ಇನ್ನೂ ಕೆಲವು ಚಿತ್ರಗಳು ಹುಡುಕಿಕೊಂಡು ಬಂದಿವೆ. ಅಣಜಿ ನಾಗರಾಜ್ ಅವರ 'ಸೊಂಬೇರಿ' ಚಿತ್ರ ಹಾಗೂ ರಾಮು ನಿರ್ಮಾಸಲಿರುವ 'ಪುಂಗಿದಾಸ್' ಚಿತ್ರಗಳು ಕೋಮಲ್ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿವೆ. ರಾಕೆಟ್ ಗೌಡ ಚಿತ್ರದ ಉಳಿದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. (ಏಜೆನ್ಸೀಸ್)

  English summary
  Comedy hero Komalkumar's upcoming movie titled as Rocket Gowda. The movie is producing on his own banner. The actor is decided to shooting the entire film in Georgia. Meanwhile the actor is busy in Govindayanamaha and Karodpathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X