»   » ಸಖತ್ ಟೈಟ್ ಆದ ಲೂಸ್ ಮಾದ ಯೋಗೇಶ್

ಸಖತ್ ಟೈಟ್ ಆದ ಲೂಸ್ ಮಾದ ಯೋಗೇಶ್

Posted By:
Subscribe to Filmibeat Kannada
ಲೂಸ್ ಮಾದ ಯೋಗೇಶ್ ಅದೆಷ್ಟು ಬಾರಿ ಟೈಟಾದರೂ ಅವರಿಗೂ ಅವರನ್ನು ಕರೆಯುವವರಿಗೂ 'ಲೂಸ್' ಎಂಬ ಹೆಸರೇ ಪ್ರಿಯವಾಗಿಬಿಟ್ಟಿದೆ. ಅವರು ಲೂಸಾದರೇನು? ಅಲೆಮಾರಿ ಚೆನ್ನಾಗಿ ಓಡುತ್ತಿದೆ. ಅಷ್ಟೇ ಅಲ್ಲ, ಯೋಗಿಗೆ ಬರುತ್ತಿರುವ ಆಫರ್ ಗಳು ಹೆಚ್ಚುತ್ತಿವೆ. ತಮಿಳಿನಲ್ಲಿ ಧನುಷ್ ನಟಿಸಿರುವ ಚಿತ್ರಗಳೆಲ್ಲವನ್ನೂ ಯೋಗಿ ಕನ್ನಡದಲ್ಲಿ ಮಾಡಲೇಬೇಕು ಎಂಬಂತಾಗಿಬಿಟ್ಟಿದೆ. ಇದೀಗ ಯೋಗೇಶ್ ಕಾಲ್ ಶೀಟ್ ಫುಲ್ ಟೈಟ್!

ತಮಿಳಿನ ಪೊಲ್ಲಾಧವನ್, ಕಾದಲ್ ಕೊಂಡೇನ್ ಮುಂತಾದ ಚಿತ್ರಗಳ ಬಗ್ಗೆ ಕೇಳಿಬಂದ ಈ ಮಾತು ಇದೀಗ ಮೊನ್ನೆ ಮೊನ್ನೆ ಬಿಡುಗಡೆಯಾದ '3' ಚಿತ್ರಕ್ಕೂ ಹಬ್ಬಿದೆ. ಇದೀಗ ಧನುಷ್ '3' ಚಿತ್ರವನ್ನು ಯೋಗೇಶ್ ಕನ್ನಡದಲ್ಲಿ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಧನುಷ್ ಬೆಂಗಳೂರಿಗೆ ಬಂದಾಗ ಸ್ವತಃ ಯೋಗೇಶ್ ಅವರನ್ನು ಭೇಟಿಯಾಗಿ ಬಂದಿದ್ದರು.

ಇದೀಗ ಬಂದಿರುವ ಸುದ್ದಿಯೆಂದರೆ 2011ರಲ್ಲಿ ತಮಿಳು, ತೆಲುಗಿನಲ್ಲಿ ಭರ್ಜರಿ ಹಿಟ್ ದಾಖಲಿಸಿದ್ದ ಮನೋಜ್ ಮಂಚು ನಟನೆಯ 'ಬಿಂದಾಸ್' ಚಿತ್ರವನ್ನು ಕನ್ನಡದಲ್ಲಿ ಯೋಗೇಶ್ ನಾಯಕತ್ವದಲ್ಲಿ ತರಲು ನಿರ್ಮಾಪಕರೊಬ್ಬರು ಯೋಗಿ ಮನೆಗೆ ಓಡಾಡುತ್ತಿದ್ದಾರೆ. ಆದರೆ ಯೋಗಿ ತಂದೆ ಸಿದ್ಧರಾಜು ಅದಕ್ಕಿನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಆದರೆ ಕನ್ನಡದಲ್ಲಿ ಈಗಾಗಲೇ ಬಿಂದಾಸ್ ಹೆಸರಿನ ಚಿತ್ರ ಬಂದಿರುವುದರಿಂದ ಟೈಟಲ್ ಬದಲಾಗುವುದು ಗ್ಯಾರಂಟಿ ಎನ್ನಲಾಗಿದೆ. ಲೂಸ್ ಮಾದನಿಗೆ ಹೊಂದಿಕೆಯಾಗಬಲ್ಲ ಹೆಸರಿಗೆ ಹುಡುಕಾಟ ನಡೆದಿದೆ. ಸದ್ಯದಲ್ಲೇ ಎಲ್ಲವೂ ಪಕ್ಕಾ ಆಗಲಿದ್ದು ಮಹೂರ್ತ ನಿಗದಿ ಆಗಲಿದೆ. (ಒನ್ ಇಂಡಿಯಾ ಕನ್ನಡ)

English summary
Actor Loose Mada Yogesh acts in the Remake Tamil movie 'Bindas' in Kannada. Title has to change because, In Kannada Bindas Titled movie already released. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada