»   »  ಎರಡುವರೆ ಕೋಟಿಯಲ್ಲಿ ಪೊಲೀಸ್ ಕ್ವಾರ್ಟರ್ಸ್

ಎರಡುವರೆ ಕೋಟಿಯಲ್ಲಿ ಪೊಲೀಸ್ ಕ್ವಾರ್ಟರ್ಸ್

Posted By:
Subscribe to Filmibeat Kannada
A M R Ramesh back with Police Quaters
ಸೈನೈಡ್ ನಿರ್ಮಿಸಿ ಹೆಸರು ಮಾಡಿರುವ ನಿರ್ದೇಶಕ ಎಎಂಆರ್ ರಮೇಶ್ ಇದೀಗ ಪೋಲಿಸ್ ಕ್ವಾರ್ಟಸ್ ನಲ್ಲಿ ಕಣ್ಮರೆಯಾದ ಘಟನೆಯೊಂದನ್ನು ಆಧರಿಸಿ ಕನ್ನಡವಲ್ಲದೇ, ತಮಿಳಿನಲ್ಲೂ ಚಿತ್ರಮಾಡಲು ಹೊರಟಿದ್ದಾರೆ. ಕನ್ನಡದಲ್ಲಿ ಈ ಚಿತ್ರದ ಹೆಸರು "ಪೋಲಿಸ್ ಕ್ವಾರ್ಟರ್ಸ್ "ಆದರೆ ತಮಿಳಿನಲ್ಲಿ "ಕಾವಲರ್ ಕುಡಿಯಿರ್ಪು".

1992ರ ಬಾಬ್ರಿ ಮಸೀದಿ ಧ್ವಂಸದ ನಂತರ ನಡೆಯುವ ಗಲಭೆಯಲ್ಲಿ ಕಾಣೆಯಾದ ಪೋಲಿಸ್ ಅಧಿಕಾರಿಯೊಬ್ಬರ ವಾಸ್ತವ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರದ ಚಿತ್ರೀಕರಣವನ್ನು 65 ದಿನಗಳಲ್ಲಿ ಮುಗಿಸುತ್ತೇವೆ ಎಂದ ರಮೇಶ್ ಸಿಎಆರ್ ಕ್ವಾರ್ಟಸ್ ಸೇರಿದಂತೆ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎಂದರು.

ಸೂಪರ್ 60 ಅನ್ನುವ ಅತ್ಯಾಧುನಿಕ ಕ್ಯಾಮರಾವನ್ನು ಕನ್ನಡದಲ್ಲಿ ಪ್ರಥಮಬಾರಿಗೆ ಬಳಸುತ್ತಿದ್ದೇವೆ, ಎರಡು ಭಾಷೆಯಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಸುಮಾರು ಎರಡೂವರೆ ಕೋಟಿ ಬಜೆಟ್ ಆಗಬಹುದು ಎಂದು ರಮೇಶ್ ಹೇಳಿದ್ದಾರೆ. ರಮೇಶ್ ಅವರ ಪತ್ನಿಯೇ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಆನಿಷ್ ಮತ್ತು ನಾಯಕಿಯಾಗಿ ಸೋನು ಇರುತ್ತಾರೆ. ತಮಿಳಿನ ದ್ವಾರಕನಾಥ್ ಛಾಯಾಗ್ರಾಹಕರಾಗಿದ್ದರೆ, ಜೇಮ್ಸ್ ವಸಂತ್ ಎನ್ನುವ ಹೊಸಬರ ಸಂಗೀತವಿದೆ.

ಹೀಗೂ ಉಂಟೆ? : ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕನ್ನಡದಲ್ಲಿ ಶೀರ್ಷಿಕೆ ಇದ್ದರೆ ಮಾತ್ರ ಚಿತ್ರ ನಿರ್ಮಾಣಕ್ಕೆ ಅನುಮತಿ ನೀಡುವ ತೀರ್ಮಾನ ಕೈಗೊಂಡಿತ್ತು. ಈಗ ರಮೇಶ್ ಅವರ "ಪೋಲಿಸ್ ಕ್ವಾರ್ಟರ್ಸ್" ಎಂಬ ಆಂಗ್ಲ ಶೀರ್ಷಿಕೆಗೆ ಅನುಮತಿ ನೀದಿದ್ದಾರೂ ಹೇಗೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಿಸ್‌ ಮಾಡದಿರಿ, ಒಳ್ಳೆ ಚಿತ್ರಕ್ಕೆ 'ಸೈನೈಡ್‌" ಮಾದರಿ(ವಿಮರ್ಶೆ)
ಹಿಂದಿಯ 'ಸೈನೈಡ್‌"ನಲ್ಲಿ ಅಮಿತಾಭ್‌, ನಾನಾ ಗ್ಯಾರಂಟಿ
'ಸೈನೈಡ್‌" ಮುಗೀತು! ಇನ್ಮುಂದೆ ವೀರಪ್ಪನ್‌ಬೇಟೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada