»   »  ಕಾಮಿಡಿಗೆ ಜೈ ರೀಮೇಕ್ ಗೂ ಸೈ ಎಂದ ಪುನೀತ್

ಕಾಮಿಡಿಗೆ ಜೈ ರೀಮೇಕ್ ಗೂ ಸೈ ಎಂದ ಪುನೀತ್

Posted By:
Subscribe to Filmibeat Kannada
Puneeth Rajkumar likes comedy roles
ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರ 'ರಾಮ್' ಸೋಮವಾರ ಸೆಟ್ಟೇರಿತು. ತೆಲುಗಿನ 'ರೆಡಿ' ಚಿತ್ರದ ರೀಮೇಕ್ ರಾಮ್. ಇದೊಂದು ಕಾಮಿಡಿ ಚಿತ್ರ ಎನ್ನುತ್ತಾರೆ ಪುನೀತ್. ಇನ್ನು ಮುಂದೆ ತಾವು ಕಾಮಿಡಿ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಾಗಿ ಪುನೀತ್ ತಿಳಿಸಿದರು.

ಪುನೀತ್ ಅವರಿಗೆ ಮಾದೇಶ್ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಸಂಗೀತ ವಿ.ಹರಿಕೃಷ್ಣ ಮತ್ತು ಛಾಯಾಗ್ರಹಣ ಕೃಷ್ಣಕುಮಾರ್ ಅವರದು. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ಇದರಲ್ಲಿ ಎಲ್ಲ ಸಂಬಂಧಗಳು ಬಂದು ಹೋಗುತ್ತವೆ. ತೆಲುಗಿನಲ್ಲಿ ತುಂಬ ಉದ್ದವಾಗಿದ್ದ ಚಿತ್ರಕಥೆಯನ್ನು ಮೊಟುಕುಗೊಳಿಸಿ ಕನ್ನಡಕ್ಕೆ ತರುತ್ತಿದ್ದೇವೆ ಎಂದರು ಪುನೀತ್.

ಸೂಪರ್ ಹಿಟ್ 'ಗಜ' ಚಿತ್ರದ ನಿರ್ದೇಶಕ ಮಾದೇಶ ಮಾತನಾಡುತ್ತಾ, ಪವರ್ ಸ್ಟಾರ್ ಗೆ ನಿರ್ದೇಶನ ಮಾಡುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ಫೆ.15ರವರೆಗೂ ಚಿತ್ರೀಕರಣ ನಡೆಯಲಿದೆ. ನಂತರ ಮಾರ್ಚ್ ತಿಂಗಳ ಮೂರನೇ ವಾರದಿಂದ ಚಿತ್ರೀಕರಣ ಸಾಗಲಿದೆ. ಮೈಸೂರು, ಮಲೆಮಾದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಉತ್ತರ ಕರ್ನಾಟಕದಲ್ಲಿ ರಾಮ್ ಚಿತ್ರೀಕರಣ ನಡೆಯಲಿದೆ. ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿರುತ್ತವೆ ಎಂದು ವಿವರ ನೀಡಿದರು.

ಈ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಲಿದ್ದಾರೆ. ಸಹೋದರ ನಡುವಿನ ಸಮಸ್ಯೆಗಳನ್ನು ಪರಿಹರಿಸುತ್ತಾ ಕಡೆಗೆ ತನ್ನ ತಂಗಿಯ ಮದುವೆ ಮಾಡುತ್ತಾನೆ ಚಿತ್ರದ ನಾಯಕ. ಪುನೀತ್ ಗೆ ಈ ಪಾತ್ರ ಸೂಕ್ತವಾಗಿ ಒಪ್ಪುತ್ತದೆ ಎನ್ನುತ್ತಾರೆ ಮಾದೇಶ. ಚಿತ್ರತಂಡ ದೊಡ್ಡದಾಗಿದೆ, ಚಿತ್ರವೂ ದೊಡ್ಡದಾಗಿದೆ ಹಾಗಾಗಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದರು ಚಿತ್ರದ ನಿರ್ಮಾಪಕ ಆದಿತ್ಯ ಬಾಬು. ಒಟ್ಟಿನಲ್ಲಿ ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರ ಎಂಬುದು ಅವರ ವಿವರಣೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada