»   »  ಸೆನ್ಸಾರ್ ವೀಕ್ಷಣೆಗೆ 'ರಾಜ್, ದಿ ಶೋಮ್ಯಾನ್'

ಸೆನ್ಸಾರ್ ವೀಕ್ಷಣೆಗೆ 'ರಾಜ್, ದಿ ಶೋಮ್ಯಾನ್'

Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿತ 'ರಾಜ್, ದಿ ಶೋಮ್ಯಾನ್' ಚಿತ್ರದ ಪ್ರಥಮಪ್ರತಿ ಅಂತೂ ತಯಾರಾಗಿದ್ದು ಸೆನ್ಸಾರ್ ವೀಕ್ಷಣೆಗೆ ನಿರ್ದೇಶಕ ಪ್ರೇಮ್ ಪ್ರತಿಯನ್ನು ಕಳುಹಿಸಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಬರಲಿದ್ದು ಆನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.

ರಾಜ್ಯಾದ್ಯಂತ ಚಿತ್ರಮಂದಿರದ ಮಾಲೀಕರಿಂದ ಈ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆ ದಿನಾಂಕ ಘೋಷಣೆವಾಗುವ ಮೊದಲೇ ಸುಮಾರು 40 ಕ್ಕೂ ಹೆಚ್ಚು ಚಿತ್ರಮ೦ದಿರಗಳು ಚಿತ್ರ ಪ್ರದರ್ಶಿಸುವುದಾಗಿ ಜಾಹೀರಾತು ನೀಡಿವೆ. ರಾಜ್, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಬಜೆಟ್ ನ ಚಿತ್ರವಾಗಿದೆ. ನಿರ್ಮಾಪಕರಾದ ಸುರೇಶ್ ಗೌಡ ಮತ್ತು ಶ್ರೀನಿವಾಸಮೂರ್ತಿಧಾರಾಳವಾಗಿ ಖರ್ಚುಮಾಡಿರುವ ಈ ಚಿತ್ರದ ಆಡಿಯೋ ಈಗಾಗಲೇ ದಾಖಲೆ ಮಾರಾಟ ಕಂಡಿದೆ.

ನಿರ್ದೇಶಕ ಪ್ರೇಮ್ ಈ ಬಗ್ಗೆ ಮಾತನಾಡುತ್ತಾ, ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ ನೀಡುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ. ರಾಜ್ ಚಿತ್ರ ಯಶಸ್ಸು ಕಂಡರೆ ಸ್ಯಾಂಡಲ್ ವುಡ್ ಮತ್ತೆ ಗರಿಗೆದರಿ ನಿಲ್ಲುತ್ತದೆ ಎನ್ನುವುದು ಗಾಂಧೀನಗರದ ಲೆಕ್ಕಾಚಾರ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಚಿತ್ರ ತೆಗೆದಿದ್ದೇವೆ.ಖಂಡಿತ ಯಶಸ್ಸು ಗಳಿಸುತ್ತದೆ ಎಂದು ಪ್ರೇಮ್ ಹೇಳಿದ್ದಾರೆ.

ಇವರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ 'ಜೋಗಿ' ಚಿತ್ರಕ್ಕೂ ಇದೇ ರೀತಿ ಕ್ರೇಜ್ ಹುಟ್ಟಿಸುವಲ್ಲಿ ಪ್ರೇಮ್ ಯಶಶ್ವಿಯಾಗಿದ್ದರು ಮತ್ತು ಆ ಚಿತ್ರ ನಿರ್ಮಾಪಕ ಅಶ್ವಿನಿ ರಾಂಪ್ರಸಾದ್ ಅವರ ಬ್ಯಾಂಕ್ ಬ್ಯಾಲನ್ಸ್ ತುಂಬಿತುಳುಕುವಂತೆ ಮಾಡಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada