»   » ಚೊಚ್ಚಲ ಚಿತ್ರದಲ್ಲೇ ಗೆಲುವಿನ ನಗೆ ಬೀರಿದ ರಾಧಿಕಾ

ಚೊಚ್ಚಲ ಚಿತ್ರದಲ್ಲೇ ಗೆಲುವಿನ ನಗೆ ಬೀರಿದ ರಾಧಿಕಾ

Posted By:
Subscribe to Filmibeat Kannada

ಚಲನಚಿತ್ರ ನಿರ್ಮಾಪಕಿಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಗೆದ್ದಿದ್ದಾರೆ. ಅವರ ನಿರ್ಮಾಣದ 'ಲಕ್ಕಿ' ಚಿತ್ರ ಮೊದಲ ವಾರದಲ್ಲೇ ಉತ್ತಮ ಗಳಿಕೆ ಕಂಡಿದೆ. ಸುಮಾರು 80 ಪ್ಲಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಲಕ್ಕಿ ಚಿತ್ರ ವಾರದಲ್ಲೇ ರು.1.50 ಕೋಟಿ ಕಲೆಹಾಕಿದೆಯಂತೆ.

ಕೇವಲ ರಾಧಿಕಾ ಅವರಿಗಷ್ಟೇ 'ಲಕ್ಕಿ'ಯಾಗದ ಈ ಚಿತ್ರ ತಾರೆಗಳಾದ ರಮ್ಯಾ ಹಾಗೂ ಯಶ್‌ಗೂ ಒಳ್ಳೆಯ ಹೆಸರು ತಂದಿದೆಯಂತೆ. ಒಟ್ಟಿನಲ್ಲಿ 'ಲಕ್ಕಿ' ಚಿತ್ರವನ್ನು ಯಶಸ್ವಿಯಾಗಿ ಗೆಲ್ಲಿಸಿದ್ದಕ್ಕೆ ಚಿತ್ರತಂಡ ಚಿತ್ರಪ್ರೇಮಿಗಳಿಗೆ ಮೆನಿ ಮೆನಿ ಥ್ಯಾಂಕ್ಸ್ ಹೇಳಿದೆ.

ಈ ಚಿತ್ರಕ್ಕೆ ಸುಮಾರು ಐದು ಕೋಟಿ ರುಪಾಯಿ ಬಂಡವಾಳ ಹೂಡಿದ್ದರು ರಾಧಿಕಾ ಕುಮಾರಸ್ವಾಮಿ. ಈ ಚಿತ್ರ ಮುಂಬರುವ ದಿನಗಳಲ್ಲಿ ಇನ್ನಷ್ಟು ಗಳಿಕೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ನಿರ್ಮಾಪಕರಿದ್ದಾರೆ. ಇನ್ನು ಸ್ವಾಟಲೈಟ್ ರೈಟ್ಸ್, ಡಬ್ಬಿಂಗ್ ರೈಟ್ಸ್ ಇದ್ದೇ ಇದೆ. (ಒನ್‌ಇಂಡಿಯಾ ಕನ್ನಡ)

English summary
Actress Radhika Kumaraswamy gives a winning smile as a Lucky producer. The movie is showing successfully about 80 plus theaters all over Karnataka. The movie got positive response from audience. As per the trade reports the movie collected a gross of around Rs 1.50 crore in first 7 days of release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada