For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್

  By Staff
  |
  ''ನನಗೆ ಕನ್ನಡದಲ್ಲಿ ಮತ್ತೆ ನಟಿಸುವ ಆಸೆಯಿದೆ. ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ಇತ್ತೀಚಿಗೆ ಕಾದಂಬರಿಯಾಧಾರಿತ ಚಿತ್ರಗಳು ಬರುತ್ತಿಲ್ಲ. ಹಿಂದೆ ಪುಟ್ಟಣ್ಣ ಕಣಗಾಲ್ ಸೇರಿದಂತೆ ತುಂಬಾ ನಿರ್ದೇಶಕರು ಕಾದಂಬರಿಗಳನ್ನು ಆಯ್ದುಕೊಂಡು ಚಿತ್ರ ನಿರ್ಮಿಸುತ್ತಿದ್ದರು.ಕನ್ನಡದಲ್ಲಿ 'ದಳವಾಯಿ ಮುತ್ತಣ್ಣ'ನಂತಹ ಪಾತ್ರಗಳಲ್ಲಿ ನಟಿಸುವ ಬಯಕೆಯಿದೆ. ಅವಕಾಶ ಸಿಕ್ಕಿದರೆ ಯಾವುದೇ ಮುಲಾಜಿಲ್ಲದೆ ಕನ್ನಡದಲ್ಲಿ ನಟಿಸಲು ನಾನು ಸಿದ್ಧನಿದ್ದೇನೆ'' ಹೀಗೆಂದು ಸ್ಪುಟವಾದ ಕನ್ನಡದಲ್ಲಿ ತನ್ನ ಮನದಾಳದ ಮಾತನ್ನು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಮೃತ ಮಹೋತ್ಸವದ ಎರಡನೇ ದಿನ ಬಿಚ್ಚಿಟ್ಟರು.

  ಕನ್ನಡ ಚಲನಚಿತ್ರದ ಅಮೃತ ಮಹೋತ್ಸವ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ರಜನೀಕಾಂತ್ ಮಾತನಾಡುತ್ತಿದ್ದರು. ಈಗಿನ ಪೀಳಿಗೆಯವರಿಗೆ ಕಾದಂಬರಿ ಓದುವ ಹವ್ಯಾಸ ಕಡಿಮೆಯಾಗಿದೆ. ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಸಾಕಷ್ಟು ಕಾದಂಬರಿಗಳನ್ನು ಓದುತ್ತಿದ್ದೆ. ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ಓದಿಯೆಂದು ವಿದ್ಯಾರ್ಥಿಗಳಿಗೆ ರಜನಿ ಮನವಿ ಮಾಡಿದರು.

  ನಾನು ರಾಜಣ್ಣನನ್ನು ತುಂಬಾ ಮಿಸ್ ಮಾಡ್ಕೋತಾಯಿದ್ದೀನಿ. ಅತಿರಥ ಮಹಾರಾಥರಗಿದ್ದ ರಾಜ್ ಅವರ ಸಂತ ತುಕಾರಾಂ ಮತ್ತಿತ್ತರ ಚಿತ್ರಗಳು ನನ್ನಲ್ಲಿ ಬಹಳಷ್ಟು ಪರಿಣಾಮ ಬೀರಿದೆ. ಅಣ್ಣನ ಬಗ್ಗೆ ತುಂಬಾ ಮಾತಾಡಿ ಪಾರ್ವತಮ್ಮ ಅವರ ಮನಸ್ಸು ನೋಯಿಸುವುದು ನನಗೆ ಇಷ್ಟವಿಲ್ಲ ಎಂದು ರಜನಿ ಸಮಾರಂಭದಲ್ಲಿ ಹೇಳಿದರು.

  ಕನ್ನಡ ಚಿತ್ರರಂಗದ ಎಪ್ಪತ್ತೈದು ವರ್ಷದ ಸಮಾರಂಭ ಹೆಮ್ಮೆಯ ವಿಷಯ. ಡಾ. ರಾಜ್ ಅವರ ಅಗಲಿಕೆ ಈ ಮಹೋತ್ಸವದ ದೊಡ್ಡ ಕೊರಗು ಎಂದು ಇನ್ನೊಬ್ಬ ಖ್ಯಾತ ನಟ ಪ್ರಕಾಶ್ ರೈ ಈ ಸಂದರ್ಭದಲ್ಲಿ ಹೇಳಿದರು.

  ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ ಅವರ ಕೊಡುಗೆ ಅಪಾರ. ಸರಕಾರ ರಾಜ್ ಸ್ಮಾರಕಕ್ಕೆ ಹೆಚ್ಚಿನ ಜಮೀನು ನೀಡಿ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಖ್ಯಾತ ನಟಿ ಜಯಪ್ರದ ಆಗ್ರಹಿಸಿದರು. ಸಮಾರಂಭದಲ್ಲಿ ಪ್ರಭುದೇವ ಮತ್ತು ಹಿರಿಯ ನಟ ನಟಿಯರು ಮತ್ತು ತಂತ್ರಜ್ಞರು ಭಾಗವಹಿಸಿದ್ದರು.

  (ದಟ್ಸ್ ಕನ್ನಡ ಚಿತ್ರವಾರ್ತೆ)
  ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
  ಪೈರಸಿ ತಡೆಗೆ ಶೀಘ್ರ ಕಾನೂನು: ಯಡಿಯೂರಪ್ಪ
  ಅಮೃತ ಮಹೋತ್ಸವ ಪುಸ್ತಕಗಳು ಅನಾವರಣ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X