For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಸಾರಥಿ ಶತದಿನೋತ್ಸವ ಸಂಭ್ರಮ ಮುಂದೂಡಿಕೆ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಮುಂದೂಡಲಾಗಿದೆ. ಈ ಹಿಂದೆ ಜನವರಿ 8ರಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಜನವರಿ 16ರ ಸೋಮವಾರಕ್ಕೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

  ಬೆಂಗಳೂರು ವಿಜಯನಗರದ ಬಂಟರ ಕಲ್ಯಾಣಮಂಟದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 2011ನೇ ಸಾಲಿನ ಸೂಪರ್ ಹಿಟ್ ಚಿತ್ರವಾಗಿ ಸಾರಥಿ ಹೊರಹೊಮ್ಮಿದ್ದು ನಿರ್ಮಾಪಕ ಕೆ ವಿ ಸತ್ಯ ಪ್ರಕಾಶ್ ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

  ಇಷ್ಟಕ್ಕೂ 'ಸಾರಥಿ' ಶತದಿನೋತ್ಸವ ಸಂಭ್ರಮವನ್ನು ಮುಂದೂಡಲು ಕಾರಣ ಏನು? ದರ್ಶನ್ ಅಭಿನಯದ ಮತ್ತೊಂದು ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರೀಕರಣವನ್ನು ಇನ್ನಷ್ಟು ದಿನ ವಿಸ್ತರಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸದ್ಯಕ್ಕೆ ಸಂಗೊಳ್ಳಿ ರಾಯಣ್ಣ ಚಿತ್ರೀಕರಣ ಬೆಳಗಾವಿಯಲ್ಲಿ ಭರದಿಂದ ಸಾಗಿದೆ. (ಏಜೆನ್ಸೀಸ್)

  English summary
  It is earlier reported to our viewers that Sarathi unit will celebrate its 100 days function grandly on January 8th. However, the event is now postponed by a week to January 16th due to extension the shooting dates of much awaited Darshan lead Mythological film Krantiveera Sangolli Raayanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X