For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ 101ನೇ ಚಿತ್ರ ಪುಣ್ಯವಂತ

  By Staff
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಆದರೆ ನೂರೊಂದನೆ ಚಿತ್ರ ಯಾವುದು? ಇದೀಗ ಈ ಪ್ರಶ್ನೆಗೆ 'ಪುಣ್ಯವಂತ' ಎಂಬ ಉತ್ತರ ಸಿಕ್ಕಿದೆ. ಪ್ರೇಮ್ ನಿರ್ದೇಶಿಸಿದ್ದ 'ಜೋಗಿ'ಯ ಮುಂದುವರಿದ ಭಾಗವೇ 'ಜೋಗಯ್ಯ' ಎಂಬ ಸುದ್ದಿ ಈಗಾಗಲೇ ಚಾಲ್ತಿಯಲ್ಲಿದೆ. 'ಪುಣ್ಯವಂತ'ನ ಕತೆ ಒಂಚೂರು ಭಿನ್ನವಾಗಿದೆ.

  ಶಿವರಾಜ್ ಕುಮಾರ್ ಅವರ 101ನೇ ಚಿತ್ರ ಎಂಬುದು 'ಪುಣ್ಯವಂತ'ನ ಒಂದು ವಿಶೇಷ. ಈ ಚಿತ್ರದಲ್ಲಿ 101 ಕಲಾವಿದರು ನಟಿಸಲಿದ್ದಾರೆ ಎಂಬುದು ಮತ್ತೊಂದು ವಿಶೇಷ. ಇಷ್ಟೆಲ್ಲಾ ವಿಶೇಷಗಳನ್ನು ಹೊಂದಿರುವ ಈ ಚಿತ್ರ ಸಾಂಸಾರಿಕ ಚಿತ್ರಕತೆಯನ್ನು ಒಳಗೊಂಡಿದೆಯಂತೆ. 101 ಕಲಾವಿದರ ತುಂಬಿದ ಸಂಸಾರವನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು!

  ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಲಿರುವ ಈ ಚಿತ್ರವನ್ನು ಮುನಿರಾಜು (ಬಿಟಿಎಂ ತಾವರೆಕೆರೆ ) ನಿರ್ಮಿಸುತ್ತಿದ್ದಾರೆ. ಯಲ್ಲಮ್ಮದೇವಿ ಮೂವೀಸ್ ಲಾಂಛನದಲ್ಲಿ ಚಿತ್ರ ಸೆಟ್ಟೇರಲಿದೆ. ಉಳಿದ ತಂತ್ರಜ್ಞರ, ಕಲಾವಿದರ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ. 'ನಲ್ಲ', 'ಅಂಬಿ' ಮತ್ತು 'ಮೇಘವೇ ಮೇಘವೇ' ಈ ಹಿಂದೆ ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ ಚಿತ್ರಗಳು. ಅಂದಹಾಗೆ ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಇದೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X