»   » ನಟಿ ಭವ್ಯಶ್ರೀ ಬಾಳ ಸಂಗಾತಿಯಾಗಿ ಸುರೇಶ್ ರೈ

ನಟಿ ಭವ್ಯಶ್ರೀ ಬಾಳ ಸಂಗಾತಿಯಾಗಿ ಸುರೇಶ್ ರೈ

Posted By:
Subscribe to Filmibeat Kannada

ನಟ ಹಾಗೂ ಕಿರುತೆರೆ ಕಲಾವಿದ ಸುರೇಶ್ ರೈ ಹಾಗೂ ನಟಿ ಭವ್ಯಶ್ರೀ ರೈ ಅವರ ವಿವಾಹ ಕಟೀಲು ಕ್ಷೇತ್ರದಲ್ಲಿ ನೆರವೇರಿದೆ. ಇವರ ವಿವಾಹ ಏಪ್ರಿಲ್ 26ರಂದು ಸರಳವಾಗಿ ಕಟೀಲು ಕ್ಷೇತ್ರದಲ್ಲಿ ನೆರವೇರಿದೆ. ಮೇ 2ರಂದು ಬೆಂಗಳೂರಿನಲ್ಲಿ ಸತ್ಕಾರಕೂಟ ನಡೆಯಿತು.

ಕಿರುತೆರೆಯಲ್ಲಿ ಸಾಕಷ್ಟು ಪರಿಚಿತವಿರುವ ಈ ಜೋಡಿ ಒಬ್ಬರಿಗೊಬ್ಬರು ದೂರದ ಸಂಬಂಧಿಕರು. ಒಬ್ಬರನ್ನೊಬ್ಬರು ಮೆಚ್ಚಿ ಈಗ ಜೀವನ ಸಂಗಾತಿಗಳಾಗಿದ್ದಾರೆ. 'ಕುಂಕುಮ ಭಾಗ್ಯ' ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಹಲವು ಸಿನಿಮಾಗಳಲ್ಲೂ ಭವ್ಯಶ್ರೀ ನಟಿಸಿದ್ದಾರೆ.

ಜೋಗುಳ, ಜೋಕಾಲಿ, ರಂಗೋಲಿ ಮುಂತಾದ ಟೆಲಿ ಧಾರಾವಾಹಿಗಳಲ್ಲಿ ಸುರೇಶ್ ರೈ ಅಭಿನಯಿಸಿದ್ದಾರೆ. ಎರಡೂ ಕುಟುಂಬಗಳ ಹಿರಿಯರ ನಿರ್ಧಾರದಂತೆ ತಾವು ವಿವಾಹವಾಗಿದ್ದಾಗಿ ಈ ನೂತನ ಜೋಡಿ ತಿಳಿಸಿದೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada