»   » ತ್ರಿಷಾ ಕೃಷ್ಣನ್ ಪಾಲಾದ ನಯನತಾರಾ ಕೈತುತ್ತು

ತ್ರಿಷಾ ಕೃಷ್ಣನ್ ಪಾಲಾದ ನಯನತಾರಾ ಕೈತುತ್ತು

Posted By:
Subscribe to Filmibeat Kannada

ಜಯಂ ರವಿ ನಟನೆ ಹಾಗೂ ಅಮಲಾ ಪಾಲ್ ನಿರ್ದೇಶನದ 'ಭೂಲೋಗಂ' ಚಿತ್ರದಿಂದ ನಟಿ ನಯನತಾರಾಗೆ ಗೇಟ್ ಪಾಸ್ ಕೊಡಲಾಗಿದೆ. ಆ ಜಾಗಕ್ಕೀಗ ನಟಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ. ಈ ಮೊದಲು ಆಯ್ಕೆ ಮಾಡಲಾಗಿದ್ದ ನಯನತಾರರ ಅತಿಯಾದ ಸಂಭಾವನೆ ಹಾಗೂ ಕಂಡೀಷನ್ಸ್, ಆಕೆ ಈ ಚಿತ್ರದಿಂದ ಔಟ್ ಆಗಲಿ ಕಾರಣವಾಗಿದೆ. ಆಕೆಯೇ ಬೇಕೆಂಬ ನಿರ್ಧಾರವೇನಿಲ್ಲ ಎಂದ ಚಿತ್ರತಂಡ ತ್ರಿಷಾಗೆ ಮಣೆ ಹಾಕಿ ಕೂರಿಸಿದೆ.

ಜಯಂ ರವಿ ನಾಯಕತ್ವದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಒಮ್ಮೆ ಚಿತ್ರರಂಗಕ್ಕೆ ನಿವೃತ್ತಿ ಘೋಷಿಸಿ ಪುನಃ ಬಂದು ಪ್ರಯತ್ನಿಸುತ್ತಿರುವ ನಯನತಾರಾಗೆ ಈ ಚಿತ್ರ ಮತ್ತೆ ತಮಿಳಿನಿಲ್ಲಿ ಬೇಡಿಕೆ ಸೃಷ್ಟಿಸಲಿದೆ ಎನ್ನಲಾಗುತ್ತಿತ್ತು. ಆದರೆ ಈಗ ನಯನತಾರಾ ಚಿತ್ರದಿಂದಲೇ ಹೊರಗೆ ಹೋಗಿದ್ದು ಒಂದಾದರೆ ತ್ರಿಷಾ ಕೃಷ್ಣನ್ ಆಯ್ಕೆಯಾಗಿರುವುದು ಈ ಇಬ್ಬರಲ್ಲಿ ಮೊದಲೇ ಇದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಅದ್ಯಾಕೋ ಗೊತ್ತಿಲ್ಲ, ಪ್ರಭುದೇವರ ನಂಬಿ ಹಳ್ಳಕ್ಕೆ ಬಿದ್ದಿರುವ ನಯನತಾರಾಗೆ ಮತ್ತೆ ಮತ್ತೆ ಅದೃಷ್ಟ ಕೈಕೊಡುತ್ತಿದೆ. ಅತ್ತ ಪ್ರಭುದೇವ ಬಾಲಿವುಡ್ ಕಡೆ ಮುಖ ಮಾಡಿ ವೃತ್ತಿಪರತೆ ಮೆರೆಯುತ್ತಿದ್ದರೆ ಇತ್ತ ನಯನತಾರೆ ದಕ್ಷಿಣ ಭಾರತದಲ್ಲಿ ಸಿಕ್ಕ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಆದರೂ ನಯನತಾರೆಗೆ ಕೈನಲ್ಲಿ ಚಿತ್ರಗಳಿವೆ, ಚಿಂತೆಯೇನಿಲ್ಲ ಬಿಡಿ... (ಏಜೆನ್ಸೀಸ್)

English summary
Actress Trisha Krishnan seems to have bagged Boologam, which was offered earlier to Nayantara, starring Jayam Ravi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada