For Quick Alerts
  ALLOW NOTIFICATIONS  
  For Daily Alerts

  ಈ ವಾರ ತೆರೆಗೆ 'ಯಾರೆ ನೀ ದೇವತೆ'

  By Rajendra
  |

  ಖ್ಯಾತ ಸಂಕಲನಕಾರ ಎಸ್.ಕೆ.ನಾಗೇಂದ್ರ ಅರಸ್ ಈ ಚಿತ್ರದ ನಿರ್ದೇಶನದ 'ಯಾರೆ ನೀ ದೇವತೆ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

  ಬೆಂಗಳೂರು, ರಾಮನಗರ, ಕಾಸರಗೋಡು ಮುಂತಾದಕಡೆ ಚಿತ್ರದ ಚಿತ್ರೀಕರಣ ನಡೆದಿದೆ. ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸಂಗೀತ 'ಯಾರೆ ನೀ ದೇವತೆ' ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಎಸ್.ಕೆ.ನಾಗೇಂದ್ರ ಅರಸ್, ಗಿರಿದಿನೇಶ್, ಧರ್ಮ, ಮೋಹನ್ ಜುನೇಜಾ, ಮಳವಳ್ಳಿ ಸಾಯಿಕೃಷ್ಣ ಮುಂತಾದ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ.

  ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ವೆಂಕಟ್, ನಾರಾಯಣ್ ಅವರ ಸಂಗೀತವಿದೆ. ಕೌರವ ವೆಂಕಟೇಶ್ ಸಾಹಸ, ಹರೀಶ್ ಶೃಂಗ-ಗಿರೀಶ್ ಸಂಭಾಷಣೆ, ತಂಗಾಳಿ ನಾಗರಾಜ್, ಸಂತೋಷ್ ಗೀತರಚನೆ ಹಾಗೂ ರಾಜು ಅವರ ನಿರ್ಮಾಣ ನಿರ್ವಹಣೆ 'ಯಾರೇ ನೀ ದೇವತೆ ಚಿತ್ರಕ್ಕಿದೆ. ಶ್ರೀಮಾತಾ ಅನ್ನಪೂರ್ಣೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಚಂದ್ರಕಲಾಬೆಟ್ಟಸ್ವಾಮಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X