»   »  ಮಡಿಕೇರಿಯಲ್ಲಿ ಮನಸಾರೆ ಸುಖಿಸಿದವರು

ಮಡಿಕೇರಿಯಲ್ಲಿ ಮನಸಾರೆ ಸುಖಿಸಿದವರು

By: *ಜಯಂತಿ
Subscribe to Filmibeat Kannada
ಅರೆ, ಅಷ್ಟು ಬೆಳ್ಳಗಿದ್ದ ದಿಗಂತ್ ಬಣ್ಣಕ್ಕೆ ಏನಾಗಿದೆ? ಮಡಿಕೇರಿಯಲ್ಲಿ ಆತನ ಅಭಿಮಾನಿಗಳು ನೇರವಾಗಿ ಕೇಳಿದರು. ನನ್ನ ಕಲರ್ ಹಾಳಾಗಿಲ್ಲ. ಇದು ಮೇಕಪ್ ಬಿಡಿ ಅಂತ ದಿಗಂತ್ ನಕ್ಕರು. ಮಡಿಕೇರಿಯಲ್ಲಿ ಯೋಗರಾಜ್ ಭಟ್ ಅಹೋರಾತ್ರಿ ಶೂಟಿಂಗ್ ನಡೆಸಿ ನಡೆಸಿ ಸುಸ್ತೇನೂ ಆಗಿಲ್ಲ. ದಿಗಂತ್ ಬಣ್ಣ ಮಂಕಾಯಿತಲ್ಲ ಅಂತ ಬೇಸರಾನೂ ಮಾಡಿಕೊಂಡಿಲ್ಲ. ಎಲ್ಲರೂ ಮನಸಾರೆ ಈ ಕೆಲಸ ಮಾಡುತ್ತಿದ್ದಾರೆ. ಅರ್ಥಾತ್ ಮನಸಾರೆ ಚಿತ್ರ ಚೆನ್ನಾಗಿ ಬರಲಿ ಅಂತ ಇಷ್ಟೆಲ್ಲ ಕಷ್ಟ.

ದಿಗಂತ್‌ಗೆ ಈ ಚಿತ್ರ ಮರೆಯಲಾಗದ ಅನುಭವ ಕೊಟ್ಟಿದೆ. ಅಂದ್ರಿತಾ ರೇ ಕೂಡ ತಮಗೂ ಹಾಗೇ ಆಗಿದೆ ಅಂತ ಮಾತು ಸೇರಿಸುತ್ತಾರೆ. ಇಬ್ಬರೂ ನಡುರಾತ್ರಿ ಬ್ಯಾಡ್ಮಿಂಟನ್ ಆಡಿದ್ದಾರೆ. ಶೂಟಿಂಗ್ ನಡುವೆ ಪುರುಸೊತ್ತಿನಲ್ಲಿ ಮೋಂಬತ್ತಿ ಬೆಳಕಲ್ಲಿ ಊಟ ಮಾಡಿ ಸುಖಿಸಿದ್ದಾರೆ. ಇನ್ನೂ ದಣಿವು ಅನ್ನಿಸಿದಾಗ ಈಜುಕೊಳಕ್ಕೆ ಧುಮುಕಿ ಈಜಾಡಿ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ದಿಗಂತ್ ಪಾಲಿಗೆ ಇದು ಅದ್ಭುತ ಔಟಿಂಗ್.

ಮಡಿಕೇರಿ ಅಂದಮೇಲೆ ಕೇಳಬೇಕೆ? ತಂಪು ಹವೆ. ಎಲ್ಲೆಲ್ಲೂ ಹಸಿರು. ಸ್ವರ್ಗ ಸುಖ ಅಂದರೆ ಇದಪ್ಪಾ ಅನ್ನುವ ಅಂದ್ರಿತಾ ಕಥೆ ಬಗ್ಗೆ ಕೇಳಿದರೆ ಮಾತ್ರ ತುಟಿ ಹೊಲೆದುಕೊಳ್ಳುತ್ತಾರೆ. ಇಲ್ಲಿನ ಜೈಲಿನಲ್ಲಿ ಯೋಗರಾಜ್ ಭಟ್ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಅಂದರೆ, ಇದು ಜೈಲು ಪ್ರೇಮಕಥೆಯಾ? ಭಟ್ಟರು ಏನೇನೋ ಯೋಚನೆ ಮಾಡುತ್ತಾರೆ. ಹಾಗಾಗಿ ಹೀಗೇ ಅಂತ ಹೇಳೋಕಾಗೋಲ್ಲ. ಇದೊಂದು ಬೇರೆ ಟೈಪ್ ಸಿನಿಮಾ ಆಗುತ್ತೆ ಅಂತ ದಿಗಂತ್ ಹೇಳಿ ಶೂಟಿಂಗ್ ಮುಂದುವರಿಸಿದರು. ಭಟ್ಟರು ಮಾತ್ರ ಬರವಣಿಗೆ ತಿದ್ದುವುದರಲ್ಲಿ ಬ್ಯುಸಿ.

ಯೋಗರಾಜ ಭಟ್ಟರ ಮನಸಾರೆ ಸೆಟ್ಟೇರಿದೆ
ಯೋಧನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಲಗೋರಿಯನ್ನು ಕೈಬಿಟ್ಟ ಧೀರ ರಾಕ್ ಲೈನ್ ?
ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada