ಈ ವಾರ ತೆರೆಗೆ ಈ ಶತಮಾನದ ವೀರ ಮದಕರಿ

ಚಿತ್ರದ ಶೀರ್ಷಿಕೆ ಕೇಳಿದ ಕ್ಷಣ ಐತಿಹಾಸಿಕ ಚಿತ್ರ ಅನಿಸುವುದು ಸಹಜ. ಆದರೆ ಇವನು 'ಈ ಶತಮಾನದ ವೀರಮದಕರಿ'. ಚಿತ್ರದುರ್ಗದ ರಾಜ ಮದಕರಿ ಮದಿಸಿದ ಕರಿಯ ಮದವಡಗಿಸಿದರೆ ಈ ವೀರ ಮದಕರಿ ಸಮಾಜದ ದುಷ್ಟಶಕ್ತಿಗಳನ್ನು ದಮನ ಮಾಡುತ್ತಾನೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಮದಕರಿಯ ಹಾಡುಗಳು ಕೇಳುಗರಿಗೆ ಮುದ ನೀಡುತ್ತಿದೆ. ಕರ್ನಾಟಕದ ಕೀರ್ತಿಗೆ ಕಳಶದಂತಿರುವ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯ ಸೊಬಗಿನಲ್ಲಿ ಚಿತ್ರಕ್ಕೆ ಸಾಕಷ್ಟು ಚಿತ್ರೀಕರಣ ನಡೆದಿದೆ.
ತಾಂತ್ರಿಕ ಬಳಗ: ಛಾಯಾಗ್ರಹಣ ಶ್ರೀವೆಂಕಟ್, ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್‌ರಾಜ್ ಸಹನಿರ್ದೇಶನ,ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ.
ತಾರಾಬಳಗ: ಸುದೀಪ್, ಪವಿತ್ರ, ರಹಿಣಿ, ದೇವರಾಜ್, ದಿನೇಶ್‌ಗಾಂಧಿ, ದೊಡ್ಡಣ್ಣ, ಟೆನ್ನಿಸ್‌ಕೃಷ್ಣ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಐತಿಹಾಸಿಕ ನಗರಿಗಳಲ್ಲಿ ಸುದೀಪ್ ನರ್ತನ
More from Filmibeat
ಸುದೀಪ್ ವೀರಮದಕರಿ ಕವಿರಾಜ್ ಬಾದಾಮಿ badami actor sudeep ಟೆನ್ನಿಸ್ ಕೃಷ್ಣ tennis krishna ಈ ಶತಮಾನದ ವೀರಮದಕರಿ ದಿನೇಶ್ ಗಾಂಧಿ kannada movie veera madakari mm keeravani lyricist kaviraj


Click it and Unblock the Notifications











