»   » ವಿಜಯರಾಘವೇಂದ್ರ : ಪ್ರೀತಿಯಿಂದ ಮದುವೆ ತನಕ..!

ವಿಜಯರಾಘವೇಂದ್ರ : ಪ್ರೀತಿಯಿಂದ ಮದುವೆ ತನಕ..!

Subscribe to Filmibeat Kannada


ದಿನಕ್ಕೊಂದು ಗಾಳಿಸುದ್ದಿ ಗಾಂಧಿನಗರದಲ್ಲಿ ಇದ್ದೇ ಇರುತ್ತದೆ! ಇಂತಹ ಸುದ್ದಿಗಳನ್ನು ತೇಲಿಬಿಡದಿದ್ದರೇ, ಕೆಲವರಿಗೆ ಕುಡಿದ ಆಲ್ಕೋಹಾಲ್‌ ಜೀರ್ಣವಾಗುವುದಿಲ್ಲವಂತೆ!

ಒಂದು ವಿಚಿತ್ರವೆಂದರೆ, ಕೆಲವು ಗಾಳಿಸುದ್ದಿಗಳು ನಂತರದ ದಿನಗಳಲ್ಲಿ ನೈಜ ಸುದ್ದಿಗಳಾಗಿದ್ದೂ ಉಂಟು! ತುಂಬಾ ದಿನ ನಿರಾಕರಿಸಿ, ಕಡೆಗೆ ‘ಹೌದೂರೀ... ನಮ್ಮಿಬ್ಬರ ಮಧ್ಯೆ ಲವ್‌ ಇದ್ದದ್ದು ನಿಜ’ ಎಂದವರು ನಮ್ಮ ಮಧ್ಯೆ ಇದ್ದಾರೆ.(ರಕ್ಷಿತಾ-ಪ್ರೇಮ್‌, ಮಾಳವಿಕಾ-ಅವಿನಾಶ್‌, ಉಪೇಂದ್ರ-ಪ್ರಿಯಾಂಕ ಮತ್ತಿತರರ ಪ್ರೇಮ ಪ್ರಸಂಗ). ಈಗ ಎಲ್ಲರ ಬಾಯಲ್ಲೂ ನಟ ವಿಜಯರಾಘವೇಂದ್ರರ ಪ್ರೇಮ ಪ್ರಸಂಗವೇ ಸುಳಿದಾಡುತ್ತಿದೆ.

ವಿಜಯರಾಘವೇಂದ್ರರ ಹೃದಯ ಕದ್ದ ಹುಡುಗಿ, ಸಿಸಿಬಿ ಮುಖ್ಯಾಧಿಕಾರಿ ಬಿ.ಕೆ.ಶಿವರಾಂ ಪುತ್ರಿ ಎಂಬುದು ಚಲಾವಣೆಯಲ್ಲಿರುವ ಸುದ್ದಿ. ‘ಈ ರಾಜೀವ್‌... ಗಾಂಧಿ ಅಲ್ಲ’ ಚಿತ್ರದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಪಾತ್ರಮಾಡಿದ್ದ ವಿಜಯರಾಘವೇಂದ್ರ, ಸಿಸಿಬಿ ಅಧಿಕಾರಿ ಮಗಳನ್ನು ವರಿಸಲು ಮುಂದಾಗಿರುವುದು ಕೇವಲ ಕಾಕತಾಳೀಯವಷ್ಟೇ ಎಂಬುದು ಗಾಳಿಸುದ್ದಿಕರ್ತರ ವಿವರಣೆ.

ಈ ಪ್ರೇಮ ಪ್ರಸಂಗ, ಎರಡೂ ಕುಟುಂಬಗಳಿಗೂ ಈಗ ಗೊತ್ತಾಗಿದೆ. ಕೊನೆಗೆ ಕಿರಿಯರ ಆಸೆ ಪೂರೈಸಲು ಮುಂದಾಗಿದ್ದು, ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿವೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ, ಸದ್ಯದಲ್ಲಿಯೇ ಗಟ್ಟಿಮೇಳ ಕೇಳಿಸಬಹುದೇನೋ?

ರಿಷಿ, ಕಲ್ಲರಳಿ ಹೂವಾಗಿ, ನಿನಗಾಗಿ, ಶ್ರೀ, ಪ್ರೇಮಖೈದಿ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯರಾಘವೇಂದ್ರ, ಚಿನ್ನಾರಿ ಮುತ್ತ ಚಿತ್ರದಿಂದ ಬಾಲನಟರಾಗಿ ಬಣ್ಣದ ಬದುಕು ಆರಂಭಿಸಿದವರು. ಅವರು ಪಾರ್ವತಮ್ಮ ರಾಜ್‌ಕುಮಾರ್‌ರ ಸಹೋದರ ಚಿನ್ನೇಗೌಡರ ಪುತ್ರ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada