ಗಿಲ್ಲಿ ಚಿತ್ರದ ನಾಯಕಿ ರಾಕುಲ್ ರ ಕನ್ನಡ ಪ್ರೇಮ

ದೆಹಲಿ ಮೂಲದ ಈ ಚೆಲುವೆ ಸದ್ಯಕ್ಕೆ ನಟ ಜಗ್ಗೇಶ್ ಮಗ ಗುರುರಾಜ್ ರ 'ಗಿಲ್ಲಿ 'ಚಿತ್ರದಲ್ಲಿ ನಟಿಸುತ್ತಿದ್ದಾರೆ.ಕನ್ನಡ ಕಲಿತರೆ ಡಬ್ಬಿಂಗ್ ಹೇಳಲು ಅನುಕೂಲವಾಗುತ್ತದೆ. ವ್ಯವಹಾರ ಭಾಷೆಯಾಗಿಯೂ ಬಳಸಬಹುದು ಅನಿಸಿದ್ದೇ ತಡ '30 ದಿನಗಳಲ್ಲಿ ಕನ್ನಡ ಕಲಿಯಿರಿ' ಪುಸ್ತಕದಲ್ಲಿ ತಲ್ಲೀನರಾಗಿದ್ದಾರೆ.
ದಿನಕ್ಕಿಷ್ಟು ಕನ್ನಡ ಪದಗಳನ್ನು ಕಲಿಯುತ್ತಿದ್ದಾರೆ. ಕಾಫಿ ಆಯ್ತಾ?...ಊಟ ಆಯ್ತಾ ಎಂದು ಕೇಳುವಷ್ಟರ ಮಟ್ಟಿಗೆ ರಾಕುಲ್ ರ ಕನ್ನಡ ಭಾಷೆ ಸುಧಾರಿಸಿದೆ. ಆಕೆ ಹೀಗೇ ಕನ್ನಡ ಕಲಿಕೆಯಲ್ಲಿ ಮುಂದುವರಿದಿದ್ದೇ ಆದರೆ ಖಂಡಿತ 30 ದಿನಗಳಲ್ಲಿ ಕಲಿಯುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಕನ್ನಡಕ್ಕೆ ಆಮದಾಗುತ್ತ್ತಿರುವ ನಟಿಯರಿಗೆ ರಾಕುಲ್ ರ ಕನ್ನಡ ಕಲಿಕೆ ಒಂದು ಮಾದರಿಯಾಗಬಹುದು. ಒಟ್ಟಿನಲ್ಲಿ ರಾಕುಲ್ ರ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚತಕ್ಕದ್ದು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ:ಗಿಲ್ಲಿ ಚಿತ್ರಕ್ಕೆ ದಿಲ್ಲಿ ಮಾಡೆಲ್ ರಾಕುಲ್ ಸಿಂಗ್
More from Filmibeat
English summary
Gururaj Jaggesh Gururaj Jaggesh the young and upright personality is playing Gilli is all set to make debut in Sandalwood, Rakul Preet Singh is the heroine, she is now learning Kannada language in 30 days.
kannada movies ಜಗ್ಗೇಶ್ jaggesh remake ರೀಮೇಕ್ ಕನ್ನ್ನಡ ಸಿನಿಮಾ ಗುರುರಾಜ್ ಗಿಲ್ಲಿ gururaj jaggesh gilli raghav loki ರಾಕುಲ್ ಪ್ರೀತ್ ಸಿಂಗ್ ರೂಪದರ್ಶಿ ರಾಘವ ಲೋಕಿ rakul preet singh ಕನ್ನಡ ಪ್ರೇಮ


Click it and Unblock the Notifications











