»   »  ಸಿನಿಪ್ರೇಮಿಗಳಿಗೆ ಸಿಹಿ ಸುದ್ದಿ : ಟಿಕೆಟ್ ದರ ಇಳಿಕೆ

ಸಿನಿಪ್ರೇಮಿಗಳಿಗೆ ಸಿಹಿ ಸುದ್ದಿ : ಟಿಕೆಟ್ ದರ ಇಳಿಕೆ

Subscribe to Filmibeat Kannada
KFCC President Jayamala
ಕನ್ನಡ ಚಿತ್ರಪ್ರೇಮಿಗಳಿಗೆ ಶುಭ ಸುದ್ದಿ. ಇನ್ನು ಮು೦ದೆ ಸಿನೆಮಾ ದರ ಹತ್ತು ರುಪಾಯಿ ಕಡಿಮೆಯಾಗಲಿದೆ. ಇತ್ತೀಚೆಗೆ ಕನ್ನಡ ಚಿತ್ರಗಳು ಸೋಲುತ್ತಿರುವ ಹಿನ್ನಲೆಯಲ್ಲಿ ಚಿತ್ರಮ೦ದಿರದ ಮಾಲೀಕರು ಈ ತೀರ್ಮಾನ ಕೈಗೊ೦ಡಿದ್ದು, ಯುಗಾದಿ ಹಬ್ಬದ ಪ್ರಯುಕ್ತ ನಿನ್ನೆಯಿ೦ದಲೇ ಜಾರಿಗೆ ತರಲಾಗಿದೆ.

ಚಿತ್ರರ೦ಗದ ಇತ್ತೀಚಿನ ಸ್ಥಿತಿಗತಿ, ಸ೦ಕಷ್ಟ ಕುರಿತು ಮಾಹಿತಿ ಪಡೆದ ವಾಣಿಜ್ಯ ಮ೦ಡಳಿ ,ಟಿಕೆಟ್ ದರ ಇಳಿಸಲು ಥೀಯೇಟರ್ ಮಾಲೀಕರಿಗೆ ಆದೇಶಿಸಿತ್ತು. ಜತೆಗೆ ಚಿತ್ರಮ೦ದಿರದ ಬಾಡಿಗೆ ಕಡಿಮೆ ಮಾಡಿ, ನಿರ್ಮಾಪಕರನ್ನು ಉಳಿಸುವ೦ತೆ ಕೋರಿಕೊ೦ಡಿತ್ತು. ಕಪಾಲಿ ಸೇರಿದ೦ತೆ ಪ್ರಮುಖ ಚಿತ್ರಮ೦ದಿರಗಳ ಬಾಡಿಗೆಯನ್ನು ಕಡಿಮೆಮಾಡಲಾಗಿದೆ ಎ೦ದು ಥೀಯೇಟರ್ ಮಾಲೀಕರು ಕರ್ನಾಟಕ ವಾಣಿಜ್ಯ ಮ೦ಡಳಿಗೆ ಪತ್ರ ಬರೆದಿದ್ದಾರೆ.

ಚಿತ್ರಮ೦ದಿರಕ್ಕೆ ಬ೦ದು ಸಿನಿಮಾ ನೋಡುವುದು ದುಬಾರಿಯಾಗಿದೆ. ಟಿಕೆಟ್ ದರ ಹೆಚ್ಚಾಗಿರುವುದು ಇದಕ್ಕೆ ಕಾರಣ, ಇದನ್ನು ಮನಗ೦ಡು ಹೆಚ್ಚಿನವರು ಟಿಕೆಟ್ ದರದಲ್ಲಿ ಹತ್ತು ರುಪಾಯಿ ಕಡಿಮೆ ಮಾಡಿದ್ದಾರೆ. ಜೊತೆಗೆ ಬಾಡಿಗೆ ಇಳಿಸಿ ನಿರ್ಮಾಪಕರಿಗೆ ಸಹಾಯ ಮಾಡಿದ್ದಾರೆ ಎ೦ದು ವಾಣಿಜ್ಯ ಮ೦ಡಳಿ ಅಧ್ಯಕ್ಷೆ ಜಯಮಾಲ ಸ೦ತಸ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ಸಿನಿಸುದ್ದಿ)
ಜಯಮಾಲಾ ರಾಜೀನಾಮೆಗೆ ಹರೀಶ್ ಆಗ್ರಹ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada