For Quick Alerts
  ALLOW NOTIFICATIONS  
  For Daily Alerts

  ಸಪೂರ ಸುಂದರಿ ಐಶೂ, ಸ್ಥೂಲಕಾಯಳಾದರೆ ತಪ್ಪೇನಿದೆ?

  By Mahesh
  |

  ಅಲ್ಲಾ ಮಾರಾಯ್ರೆ.. ಈ ಟಿವಿ ನವರಿಗೆ ಎಂಥಾ ಮರ್ಲು ಅಂತೀನಿ.. ನಮ್ಮ ಬಂಟರ ಹೆಣ್ಣು ಐಶ್ವರ್ಯಾ ಹಿಂದೆ ಹೀಗೆ ಬಿದ್ದಿದ್ದಾರಲ್ಲ. ಐಶ್ವರ್ಯಾ ರೈ ಎಂಬ ಮಾಜಿ ವಿಶ್ವಸುಂದರಿಯನ್ನು ಅಂದಿನ ಹದಿನೆಂಟರ ಹರೆಯದ ಮೈಮಾಟದಲ್ಲೇ ಇನ್ನೂ ನೋಡಬೇಕು ಎನ್ನುವುದು ಎಷ್ಟು ಸರಿ?

  ಮದುವೆ, ಮಕ್ಕಳು ಆದ ಮೇಲೆ ಹೆಣ್ಣಿನ ತೂಕ ಹೆಚ್ಚುವುದು ಸಾಮಾನ್ಯ. ಐಶೂ ವಿಷ್ಯದಲ್ಲಿ ಎಲ್ಲವೂ ಸಹಜವಾಗಿ ನಡೆದಿದೆ. ಆದರೆ, ಟಿವಿ ಮಾಧ್ಯಮಗಳಲ್ಲಿ ಕೇವಲ ಐದು ತಿಂಗಳಲ್ಲೇ ಐಶೂ ಈ ಪರಿ ದಪ್ಪಗಾಗಿದ್ದು ಏಕೆ? ಎಂದು ಪ್ರಶ್ನಿಸುತ್ತಾ ಯಾವುದೋ ಅನ್ಯಗ್ರಹ ಜೀವಿಯನ್ನು ಜನರಿಗೆ ಪರಿಚಯಿಸುವಂತೆ ಸ್ಥೂಲಕಾಯದ ಐಶೂ ಕ್ಲಿಪ್ಪಿಂಗ್ ಗಳನ್ನು ಮತ್ತೆ ಮತ್ತೆ ತೋರಿಸುತ್ತಾ ರೇಜಿಗೆ ಹುಟ್ಟಿಸುವುದು ಎಷ್ಟರಮಟ್ಟಿಗೆ ಸರಿ?

  ಹೌದು, ಐಶ್ವರ್ಯಾ ರೈ ಬಚ್ಚನ್ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ. ಈಗಲೂ ಮಾಡೆಲ್ ಜಗತ್ತಿನ ಆರಾಧ್ಯದೈವ. ಜಾಹೀರಾತು ಲೋಕದ ಬೇಡಿಕೆಯ ನಟಿ. ಆದರೆ, ಇಲ್ಲಕ್ಕಿಂತ ಮುಖ್ಯವಾಗಿ ಈಗ ಈಕೆ ಒಂದು ಮಗುವಿನ ತಾಯಿ.

  ಮುಖೇಶ್ ಅಂಬಾನಿ ಪಾರ್ಟಿಯೊಂದಕ್ಕೆ ಹೋಗಿದ್ದ ಐಶ್ವರ್ಯಾ ರೈ ಕಂಡ ಮಾಧ್ಯಮದವರಿಗೆ ಒಂದು ಕ್ಷಣ ಈಕೆ ಐಶ್ವರ್ಯಾ ರೈ ಹೌದಾ? ಎಂದು ಪ್ರಶ್ನೆ ಮೂಡಿದ್ದು ಸಹಜ. ಸಪೂರ ಸುಂದರಿ ಐಶ್ವರ್ಯಾ ಈಗ ಸ್ಥೂಲ ಸುಂದರಿಯಾಗಿದ್ದಾಳೆ ಅಷ್ಟೇ. ಆದರೆ, ಇದನ್ನು ಒಂದು ಸಣ್ಣ ಸುದ್ದಿ ಮಾಡಿ ಬಿಡುವ ಬದಲು ಆಕೆ ಮದುವೆ, ಮಗುವಿನ ಜನನ, ಮಗುವಿನ ನಾಮಕರಣ ವಿಷಯಗಳನ್ನು ಜಗ್ಗಾಡಿದಂತೆ ಐಶೂ ಡುಮ್ಮಿಯಾಗಿದ್ದು ಹೇಗೆ ಎಂದು ಮತ್ತೆ ಸುದ್ದಿಯನ್ನು ಚ್ಯೂಯಿಂಗ್ ಗಮ್ ನಂತೆ ಎಳೆದಾಡುವುದು ಸರೀನಾ.

  ಐಶೂಗಿದೆ ಅಭಿಮಾನಿಗಳ ಬೆಂಬಲ: ಮಕ್ಕಳಾದ ಮೇಲೆ ರವೀನಾ ಟಂಡನ್, ಸೋನಾಲಿ ಬೇಂದ್ರೆ, ಕಾಜೋಲ್ ಸೇರಿದಂತೆ ಅನೇಕ ಮಾಜಿ ತಾರೆಯರು ಐಶ್ ನ ಈಗಿನ ಮೈಮಾಟವಂತೆ ಹೋಲುವಂತೆ ದಪ್ಪಗಾಗಿದ್ದರು. ಆದರೆ, ಯಾರೂ ಕೂಡಾ ತಮ್ಮ ಇಮೇಜ್ ಗೆ ಹೆದರಿ ಹೊರ ಜಗತ್ತಿಗೆ ತಮ್ಮ ಸ್ಥೂಲಕಾಯವನ್ನು ಪ್ರದರ್ಶಿಸಲಿಲ್ಲ. ಆದರೆ, ಆ ಕೆಲಸವನ್ನು ಐಶ್ವರ್ಯಾ ಮಾಡಿದ್ದಾರೆ.

  ಐಶ್ವರ್ಯಾ ಮೇಲೆ ನಂಬಿಕೆ ಇಟ್ಟಿರುವ ಜಾಹೀರಾತು ಕಂಪನಿಗಳು ಆಕೆಯ ಕಾಂಟ್ರ್ಯಾಕ್ಟ್ ಏನು ಕ್ಯಾನ್ಸಲ್ ಮಾಡಿಲ್ಲ. ಕ್ಯಾನ್ಸ್ ಉತ್ಸವಕ್ಕೆ ಐಶ್ ಗೆ ಬಂದ ಕರೆ ಏನು ಕ್ಯಾನ್ಸಲ್ ಆಗಿಲ್ಲ. ಇಷ್ಟಕ್ಕೂ ಮೈಮಾಟ ಏನೂ ಶಾಶ್ವತವಲ್ಲ. ಆದರೂ, ಚೀಪ್ ಗಿಮಿಕ್ ಮೂಲಕ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಐಶ್ ಹಿಂದೆ ಬೀಳುವ ವಾಹಿನಿಗಳಿಗೆ ಜನರೇ ಬುದ್ಧಿ ಹೇಳಬೇಕಿದೆ.

  ಹೌದು, ಬಾಣಂತನ ಮುಗಿಯುವವರೆಗೂ ಇದ್ದ ಐಶ್ವರ್ಯಾ ರೈ ಮೈಮಾಟವೇ ಬೇರೆ ಅಲ್ಲಿತನಕ ಅಭಿಮಾನಿಗಳು ನೋಡಿದ ಮಾಡೆಲಿಂಗ್ ಜಗತ್ತಿನಿಂದ ಬಂದ ಐಶ್ವರ್ಯಾ ರೈ ಬಳಕುವ ದೇಹವೇ ಬೇರೆ. ಸಿನಿತಾರೆಯರನ್ನು ಮನುಷ್ಯರಂತೆ ಕಾಣುವುದನ್ನು ರೂಢಿಸಿಕೊಂಡರೆ ಎಲ್ಲವೂ ಸರಿಯಾಗಿ ಕಾಣುತ್ತದೆ. ಎರಡು ಮೂರು ಮಕ್ಕಳಾದರೂ ಸಪೂರ ಸೊಂಟ ಉಳಿಸಿಕೊಂಡು ಕುಣಿಯಲು ಐಶೂ ಏನೂ ಐಟಂ ರಾಣಿ ಮಲೈಕಾ ಅರೋರ ಅಲ್ಲವಲ್ಲ.

  ದೇಹದ ಫಿಟ್ ನೆಸ್ ಬಗ್ಗೆ ಐಶೂಗಿಂತ ತಿಳಿದವರಿಲ್ಲ. ಮತ್ತೆ ಐಶೂ ಸಪೂರವಾದರೆ ಟಿವಿ ವಾಹಿನಿಗಳು ಮುಗಿಬೀಳುವುದು ತಪ್ಪಲ್ಲ. ಓದುಗರೇ ನೀವೇ ಹೇಳಿ ಐಶೂ ದಪ್ಪಗಿದ್ದರೆ ತಪ್ಪೇನಿದೆ? ಸಣ್ಣಗಾಗಲು ಮತ್ತೆ ಆಪರೇಷನ್ ಗೆ ಮೊರೆ ಹೋಗಬೇಕೆ? ನಿಮ್ಮ ಅಭಿಪ್ರಾಯ ತಿಳಿಸಿ.

  English summary
  While motherhood and gaining weight post delivery is a normal process for most women, it isn't for Aishwarya Rai Bachchan! At least, that's what a certain section of the media believes! While she is termed as the most beautiful and glamorous actresses in Bollywood, one tends to forget that she is a mother too

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X