For Quick Alerts
  ALLOW NOTIFICATIONS  
  For Daily Alerts

  ಗೆದ್ದ ರಾಘಣ್ಣ, ಕೋಟಿ ಕೋಟಿ ಬಾಚಿದ ಅಣ್ಣಾ ಬಾಂಡ್

  |

  ಮಂಗಳವಾರ ಯಾವುದೇ ಒಳ್ಳೆ ಕೆಲಸಕ್ಕೆ ಶುಭ ದಿನವಲ್ಲ ಎನ್ನುವ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಗೂಡದೆ ಪಕ್ಕಾ ವ್ಯಾವಹಾರಿಕ ದೃಷ್ಟಿಕೋನದಿಂದ ಚಿತ್ರ ಬಿಡುಗಡೆ ಮಾಡಿ ಹೊಸ ಪದ್ದತಿಗೆ ನಾಂದಿ ಹಾಡಿದ ವಜ್ರೇಶ್ವರಿ ಕಂಬೈನ್ಸ್ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

  ತಮ್ಮ ಚಿತ್ರದ ಬಗ್ಗೆ ನಂಬಿಕೆ ಇಟ್ಟು ಅಣ್ಣಾಬಾಂಡ್ ಚಿತ್ರವನ್ನು ಮಂಗಳವಾರ (ಕಾರ್ಮಿಕರ ದಿನ, ಮೇ 1) ಬಿಡುಗಡೆ ಮಾಡಿದ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಭರಪೂರ ಯಶ ಕಂಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ ಅಕ್ಷರಶಃ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

  ಅನಧಿಕೃತ ಮೂಲಗಳ ಪ್ರಕಾರ ಬಿಡುಗಡೆಯ ದಿನದಂದು ಪುನೀತ್ ರಾಜಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರ ಬರೋಬರಿ ಮೂರುವರೆ ಕೋಟಿ ರೂಪಾಯಿ ಗಳಿಕೆ ಕಂಡಿದೆ. ರಾಜ್ಯದ ಎಲ್ಲಾ ಕಡೆ ಮೊದಲ ದಿನ ಜಯಭೇರಿ ಬಾರಿಸಿದ ಪುನೀತ್ ಅಭಿನಯದ ಈ ಚಿತ್ರಕ್ಕೆ ಬಿಕೆಟಿ ಭಾಗದಿಂದಲೇ ಒಂದೂವರೆ ಕೋಟಿ ಆದಾಯ ಬಂದಿದೆ ಎನ್ನಾಲಾಗಿದೆ.

  ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಡೆ ಇತಿಮಿತಿಯಿಲ್ಲದೆ ಚಿತ್ರಮಂದಿರಗಳು ಚಿತ್ರ ಪ್ರದರ್ಶನ ಮಾಡಿವೆ. ರಾಮನಗರದ ಚಿತ್ರಮಂದಿರವೊಂದರಲ್ಲಿ ಥಿಯೇಟರ್ ಸಾಮರ್ಥ್ಯಕ್ಕಿಂತ 110 ಟಿಕೆಟ್ ಹೆಚ್ಚು ನೀಡಿದ್ದರಿಂದ ಅಭಿಮಾನಿಗಳು ನಿಂತುಕೊಂಡೇ ಪೂರ್ತಿ ಚಿತ್ರ ನೋಡಿದ ಉದಾಹರಣೆಗಳಿವೆ. ಚಿತ್ರಕ್ಕಿರುವ ಹೈಪ್ ನೋಡಿ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳು ಅಣ್ಣಾಬಾಂಡ್ ಗೆ ಕರೆದು ಕರೆದು ಮಣೆ ಹಾಕಿವೆ.

  ಬೆಂಗಳೂರಿನ ರಾಕ್ ಲೈನ್ ಸಿನಿಮಾಸ್ ನಲ್ಲಿ ಚಿತ್ರ ಬಿಡುಗಡೆಯ ದಿನದಂದು ಬೆಳಗಿನ ಪ್ರದರ್ಶನ 7.30ಕ್ಕೆ ಆರಂಭವಾಗಿದೆ ಅಲ್ಲದೆ ಪ್ರೇಕ್ಷಕರ ಮಹಾಪೂರವೇ ಹರಿದಿದ್ದರಿಂದ ಅಂದು 21 ಪ್ರದರ್ಶನ ನೀಡಿವೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಅಣ್ಣಾಬಾಂಡ್ ಹವಾ ರಾಜ್ಯಾದ್ಯಂತ ಜೋರಾಗಿಯೇ ಬೀಸುತ್ತಿದೆ. ಮುಂಗಾರು ಮಳೆ ಕೂಡ ರಾಜ್ಯದಲ್ಲಿ ಇದೇ ಭರದಲ್ಲಿ ಸುರಿಯಲಿ ಕನ್ನಡ ಚಿತ್ರ ಮತ್ತು ಕನ್ನಡನಾಡಿನ ಅಭಿಮಾನಿಗಳು ಆಶಿಸುತ್ತಿದ್ದಾರೆ!

  English summary
  Puneet Rajkumars latest Kannada flick Anna Bond movie records huge collection across the state. Indeed a bumper crop even before the onset of Monsoon 2012

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X