ಸದಾಶಿವ ಸಾಲಿಯಾನ್ ಗೆ ಸಿಎಂ ಆರ್ಥಿಕ ನೆರವು

ಈ ಕುರಿತು ಮಾತನಾಡಿದ ಮಟ್ಟಣ್ಣನವರ್, ಇಂದು ಸ್ಟುಡಿಯೋಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಪರಿಹಾರವನ್ನು ಧನವನ್ನು ನೀಡಿ ಸದಾಶಿವ ಸಾಲಿಯಾನ್ ಅವರ ಚಿಕಿತ್ಸೆಗೆ ನೆರವಾದರು. ಖಾಸಗಿ ಆಸ್ಪತೆಯಲ್ಲಿ ಸದಾಶಿವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಂಠೀರವ ಸ್ಟುಡಿಯೋಗೆ ಒಂದು ಎಕರೆ ಸ್ಥಳ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು. ಈ ಸ್ಥಳ ಕಂದಾಯ ಇಲಾಖೆಯ ಅಧೀನದಲ್ಲಿತ್ತು. ಬಿಡಿಎ ಕೊಟ್ಟಿರುವ ಈ ಹೊಸ ಸ್ಥಳದಲ್ಲಿ ಅನಿಮೇಷನ್ ಮತ್ತು ಡಿಜಿಟಲ್ ಸ್ಟುಡಿಯೋಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮಟ್ಟಣ್ಣನವರ್ ತಿಳಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಯಡಿಯೂರಪ್ಪ ಕಂಠೀರವ ಸ್ಟುಡಿಯೋ kanteerava studios ಗಿರೀಶ್ ಮಟ್ಟಣ್ಣನವರ್ girish mattannavar sadashiva salian relief fund ಸದಾಶಿವ ಸಾಲಿಯಾನ್ ಪರಿಹಾರ ನಿಧಿ


Click it and Unblock the Notifications