»   » ವಿಷ್ಣುಟ್ರಸ್ಟ್ ಗೆ ಅರ್ಥಪೂರ್ಣ ಹೆಸರು 'ವಿಭಾ'

ವಿಷ್ಣುಟ್ರಸ್ಟ್ ಗೆ ಅರ್ಥಪೂರ್ಣ ಹೆಸರು 'ವಿಭಾ'

Posted By:
Subscribe to Filmibeat Kannada

ಸುದೀರ್ಘ ಚರ್ಚೆಯ ಬಳಿಕ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಟ್ರಸ್ಟ್ ಗೆ ಅರ್ಥಪೂರ್ಣ ಹೆಸರೊಂದನ್ನು ಇಡಲಾಗಿದೆ. ವಿಷ್ಣು ಟ್ರಸ್ಟ್ ಗೆ ಅವರ ಕುಟುಂಬದವರು 'ವಿಭಾ' ಎಂದು ಹೆಸರಿಟ್ಟಿದ್ದಾರೆ. 'ವಿಭಾ' ಎಂದರೆ ಸಂಕ್ಷಿಪ್ತವಾಗಿ ವಿಷ್ಣುವರ್ಧನ್ ಹಾಗೂ ಭಾರತಿ ಎಂದರ್ಥ.

'ವಿಭಾ' ಟ್ರಸ್ಟ್ ನ ಸದಸ್ಯರಲ್ಲಿ ಡಾ.ಭಾರತಿ ವಿಷ್ಣುವರ್ಧನ್ ಸೇರಿದಂತೆ ವಿಷ್ಣು ಅವರ ಆತ್ಮೀಯ ಗೆಳೆಯ ಅಂಬರೀಶ್ ಸಹ ಇದ್ದಾರೆ. ಅಷ್ಟೆ ಅಲ್ಲದೆ ಅವರ ಇಬ್ಬರು ಪುತ್ರಿಯರಾದ ಚಂದನ ಮತ್ತು ಕೀರ್ತಿ ಹಾಗೂ ಅಳಿಯಂದಿರಾದ ವೇಣುಗೋಪಾಲ್ ಮತ್ತು ಅನಿರುದ್ಧ ಟ್ರಸ್ಟ್ ನ ಸದಸ್ಯರು.

ವಿಷ್ಣು ಅವರ ಸ್ಮಾರಕ ಸ್ಥಳಕ್ಕೆ ಸರಕಾರ ಬಿಡುಗಡೆ ಮಾಡಬೇಕಿದ್ದ ಎರಡು ಎಕರೆ ಜಮೀನು ಇನ್ನೂ ಮಂಜೂರಾಗಿಲ್ಲ. ಎರಡು ಎಕರೆ ಸ್ಥಳದಲ್ಲಿ ಆಸ್ಪತ್ರೆ, ಸಿನಿಮಾ ತರಬೇತಿ ಕೇಂದ್ರ ಅಥವಾ ಸ್ಮಾರಕ ನಿರ್ಮಿಸಬೇಕೆ ಎಂಬ ಬಗ್ಗೆ ಸೂಚನೆ, ಸಲಹೆಗಳು ಹರಿದು ಬರುತ್ತಿವೆ ಎಂದು ವಿಷ್ಣು ಅವರ ಅಳಿಯ ಅನಿರುದ್ಧ ತಿಳಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada