twitter
    For Quick Alerts
    ALLOW NOTIFICATIONS  
    For Daily Alerts

    ನಾಗಾಭರಣ ನಿರ್ದೇಶನದಲ್ಲಿ ಗಾನಯೋಗಿ ಜೀವನ ಚರಿತ್ರೆ

    By Rajendra
    |

    Puttaraj Gawai
    ಸಂಗೀತ ಪ್ರಧಾನ ಚಿತ್ರಗಳು ಈಗಾಗಲೆ ಸಾಕಷ್ಟು ಬಂದಿವೆ. ಒಂದು ವರ್ಗದ ಪ್ರೇಕ್ಷಕರು ಆ ಚಿತ್ರಗಳನ್ನು ಆಸ್ವಾದಿಸಿದ್ದಾರೆ. ಈಗ ಮತ್ತೊಂದು ಸಂಗೀತ ಪ್ರಧಾನ ಚಿತ್ರ ಕನ್ನಡ ಬೆಳ್ಳಿತೆರೆ ಬೆಳಗಲು ಸಿದ್ಧತೆ ನಡೆಸುತ್ತಿದೆ. ಟಿ ಎಸ್ ನಾಗಾಭರಣ ನಿರ್ದೇಶನದಲ್ಲಿ 'ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ' (3 March 1914 - 17 September 2010) ಅವರ ಜೀವನ ಚರಿತ್ರೆ ಮೂಡಿಬರಲಿದೆ.

    ಈ ಹಿಂದೆ ಪುಟ್ಟರಾಜ ಗವಾಯಿ ಅವರ ಗುರು ಗಾನಯೋಗಿ ಪಂಚಾಕ್ಷರಿ ಗವಾಯಿ ಜೀವನ ಚರಿತ್ರೆ ಕುರಿತ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರವನ್ನು ಚಿಂದೋಡಿ ಬಂಗಾರೇಶ್ ನಿರ್ದೇಶಿಸಿದ್ದರು. ಲೋಕೇಶ್ ಮತ್ತು ಗಿರೀಶ್ ಕಾರ್ನಾಡ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಹಂಸಲೇಖ ಅವರ ಸಂಗೀತ ಸಂಯೋಜನೆ, ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಯನ ಚಿತ್ರಕ್ಕಿತ್ತು.

    ಈ ಗ ಬರಲಿರುವ ಪುಟ್ಟರಾಜ ಗವಾಯಿ ಚಿತ್ರವನ್ನು ಮಾರುತಿ ಜೆಡಿಯವರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ಧರ್ಮದೇವತೆ' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಒಂಭತ್ತನೇ ಚಿತ್ರ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ. ಗವಾಯಿ ಅವರ ಪಾತ್ರವನ್ನು ಯಾರು ಪೋಷಿಸಲಿದ್ದಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ.

    ಈ ಚಿತ್ರದ ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. ಅಂದಹಾಗೆ ನಿರ್ಮಾಪಕ ಮಾರುತಿ ಅವರು ಗವಾಯಿಗಳ ಸ್ವಸ್ಥಳ ಗದುಗಿನವರು. ಹಾಗಾಗಿ ಈ ಚಿತ್ರವನ್ನು ಇವರು ತುಂಬ ಮುತುವರ್ಜಿಯಿಂದ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಉತ್ತರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಸಂಗೀತದಲ್ಲಿ ಮೂಡಿಬರುತ್ತಿರುವುದು ಈ ಚಿತ್ರದ ವಿಶೇಷ. ಗವಾಯಿಗಳ ಅಪಾರ ಶಿಷ್ಯವೃಂದಕ್ಕೆ ಈ ಚಿತ್ರ ಸ್ಫೂರ್ತಿಯಾಗಲಿದೆ.

    English summary
    Ganayogi Pandit Puttaraj Gavai life story has been becoming a movie. This music oriented film is directing by T S Nagabharana. Pandit Puttaraj Gawai (3 March 1914 – 17 September 2010) is an Indian musician in the Hindustani classical tradition, a scholar who has authored more than 80 books in Kannada, Sanskrit and Hindi.
    Wednesday, March 9, 2011, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X