»   »  ತೆಲುಗು ಚಿತ್ರದಲ್ಲಿ ಜಯಮಾಲಾ ಮಗಳು

ತೆಲುಗು ಚಿತ್ರದಲ್ಲಿ ಜಯಮಾಲಾ ಮಗಳು

Subscribe to Filmibeat Kannada

ಕೆಎಫ್ ಸಿಸಿ ಅಧ್ಯಕ್ಷೆ ಡಾ.ಜಯಮಾಲಾ ಅವರ ಮಗಳು ಸೌಂದರ್ಯ(19) ತೆಲುಗು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಅವರು ಯೋಗರಾಜ್ ಭಟ್ ನಿರ್ದೇಶನದ 'ಲಗೋರಿ' ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಎಲ್ಲಾ ಸರಿಹೋಗಿದ್ದರೆ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಲಗೋರಿ ಚಿತ್ರದಲ್ಲಿ ಸೌಂದರ್ಯ ಅಭಿನಯಿಸಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಲಗೋರಿ ಚಿತ್ರದಲ್ಲಿ ತಮ್ಮ ಮಗಳು ನಟಿಸುತ್ತಿಲ್ಲ ಎಂದು ಜಯಮಾಲಾ ಅವರು ಸ್ಪಷ್ಟಪಡಿಸಿದ್ದರು.

ಇದೀಗ ಸೌಂದರ್ಯ ನಟಿಸಲಿರುವ ತೆಲುಗು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.ಉದಯೋನ್ಮುಖ ನಟನನ್ನು ಈ ಚಿತ್ರದ ಮೂಲಕ ನಾಯಕ ನಟನನ್ನಾಗಿ ಪರಿಚಯಿಸಲಾಗುತ್ತಿದೆ ಎನ್ನುತ್ತವೆ ಮೂಲಗಳು. ಅಕ್ಟೋಬರ್ ಕೊನೆಗೆ ಚಿತ್ರ ಸೆಟ್ಟೇರಲಿದೆಯಂತೆ. ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರ ಎಂಬುದಷ್ಟೇ ಸದ್ಯಕ್ಕೆ ಲಭ್ಯವಿರುವ ವಿವರಗಳು.

ತೆಲುಗು ಚಿತ್ರದಲ್ಲಿ ನಟಿಸಿದ ಬಳಿಕ ಸೌಂದರ್ಯ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಮಲಯಾಳಂ ಚಿತ್ರ. ಈ ಬಗ್ಗೆ ಮಾತನಾಡಿರುವ ಜಯಮಾಲಾ ಅವರು, ನನ್ನ ಮಗಳಿಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ. ಯಾವುದನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಚಿತ್ರವನ್ನು ಒಪ್ಪಿಕೊಂಡ ಬಳಿಕ ಅಧಿಕೃತವಾಗಿ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada