»   »  ಬಾಕ್ಸಾಫೀಸ್ ಗಳಿಕೆಯಲ್ಲಿ 'ಜೋಶ್' ಮುನ್ನಡೆ

ಬಾಕ್ಸಾಫೀಸ್ ಗಳಿಕೆಯಲ್ಲಿ 'ಜೋಶ್' ಮುನ್ನಡೆ

Subscribe to Filmibeat Kannada
A still from Josh
'ಜೋಶ್' ಚಿತ್ರತಂಡ ಹೊಸ ಹುರುಪಿನಲ್ಲಿತ್ತು. ಕಾರಣ ಚಿತ್ರ 25 ದಿನ ಪೂರೈಸಿದೆ. ಈ ಸಂತೋಷವನ್ನು ಹಂಚಿಕೊಳ್ಳಲು ಎಸ್ ವಿ ಪ್ರೊಡಕ್ಷನ್ಸ್ ಸ್ನೇಹ ಕೂಟ ಏರ್ಪಡಿಸಿತ್ತು. ಜೋಶ್ ಖಂಡಿತವಾಗಿಯೂ ಅರ್ಧ ಶತಕ ಬಾರಿಸುತ್ತದೆ ಎಂಬ ವಿಶ್ವಾಸ ಚಿತ್ರತಂಡ ವ್ಯಕ್ತಪಡಿಸಿತು. ಕ್ರಮೇಣ ಬಿ ಮತ್ತು ಸಿ ಕೇಂದ್ರಗಳಲ್ಲೂ ಪ್ರಿಂಟ್ ಗಳ ಸಂಖ್ಯೆ ಹೆಚ್ಚುತ್ತಿರುವುದು ಅವರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಎಸ್ ವಿ ಬಾಬು, ಹೊಸ ಚಿತ್ರ, ಹೊಸ ತಂಡದ ಗೆಲುವಿಗೆ ನಿರ್ದೇಶಕ ಶಿವಮಣಿ ಮತ್ತು ಮಾಧ್ಯಗಳು ಕಾರಣ. ರಿಸ್ಕ್ ತೆಗೆದುಕೊಂಡದ್ದಕ್ಕೂ ಸಾರ್ಥಕವಾಯಿತು. ಅದರ ಪ್ರತಿಫಲ ಈಗ ಸಿಗುತ್ತಿದೆ. ಚಿತ್ರ ಬಿಡುಗಡೆಯಾಗಿರುವ 20 ಕೇಂದ್ರಗಳಲ್ಲಿ ಕಲೆಕ್ಷನ್ ಚೆನ್ನಾಗಿದೆ. ಜೋಶ್ ಐವತ್ತು ದಿನಗಳನ್ನು ಪೂರೈಸಿದ ನಂತರ ಚಿತ್ರಮಂದಿರಗಳನ್ನು ವಿಸ್ತರಿಸುತ್ತೇವೆ ಎಂದು ನಿರ್ಮಾಪಕ ಎ ಸ್ ವಿ ಬಾಬು ತಿಳಿಸಿದರು.

ಚಿತ್ರದಲ್ಲಿ ಯಾವುದೇ ಸ್ಟಾರ್ ಗಳಿಲ್ಲ. ಹೀಗಿದ್ದೂ ಜೋಶ್ ಮಾಡಿರುವ ಸಾಧನೆ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದ ಎಲ್ಲ ಶ್ರೇಯಸ್ಸು ಎಸ್ ವಿ ಬಾಬು ಅವರಿಗೆ ಸಲ್ಲಬೇಕು. ಅವರೇ ಈ ಚಿತ್ರದ ನಿಜವಾದ ಹೀರೋ ಎಂದರು ನಿರ್ದೇಶಕ ಶಿವಮಣಿ. ಚಿತ್ರದ ಬಗ್ಗೆ ಮಾಧ್ಯಮಗಳು ಸಹ ಒಂದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ವೀರೇಶ್ ಮತ್ತು ಉಮಾ ಚಿತ್ರಮಂದಿರಗಳ ಬಾಲ್ಕನಿ ಟಿಕೆಟ್ ಗಳು ಬ್ಲಾಕ್ ನಲ್ಲಿ ಮಾರಾಟವಾಗುತ್ತಿವೆ. ಪಿವಿಆರ್ ಚಿತ್ರಮಂದಿರದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಿವಮಣಿ ತಿಳಿಸಿದರು.

ಚಿತ್ರದ ಧ್ವನಿಸುರುಳಿಗಳಿಗೆ ಉತ್ತಮ ಬೇಡಿಕೆ ಬಂದಿದೆ. ಈಗ ಮೂರನೇ ಬ್ಯಾಚ್ ಸಿಡಿ ಮತ್ತು ಧ್ವನಿಸುರುಳಿಗಳು ಸಿದ್ಧವಾಗಿವೆ. ಹೊಸಬರ ಚಿತ್ರಕ್ಕೆ ಈ ರೀತಿಯ ಪ್ರತಿಕ್ರಿಯೆ ನಿಜಕ್ಕೂ ಅದ್ಭುತ ಎಂದು ಆನಂದ್ ಆಡಿಯೋ ಮೋಹನ್ ಛಾಬ್ರಿಯಾ ತಿಳಿಸಿದರು. ಒಟ್ಟಿನಲ್ಲಿ ಸ್ನೇಹಕೂಟದಲ್ಲಿ ಜೋಶ್ ಹುಡುಗರ ಸಂಭ್ರಮ ಮುಗಿಲು ಮುಟ್ಟಿತ್ತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ!
ಗಲ್ಲಾಪೆಟ್ಟಿಗೆಯಲ್ಲಿ ಜೋಶ್, ಸವಾರಿಗಳ ಗದ್ದಲ
ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!
'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada