»   »  ರಾಖಿ ಸ್ವಯಂವರಕ್ಕೆ ಕನ್ನಡ ನಟಿಯರ ಪ್ರತಿಕ್ರಿಯೆ !

ರಾಖಿ ಸ್ವಯಂವರಕ್ಕೆ ಕನ್ನಡ ನಟಿಯರ ಪ್ರತಿಕ್ರಿಯೆ !

Subscribe to Filmibeat Kannada

ರಾಖಿ ಸಾವಂತ್ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ! ಸ್ವಯಂವರದ ಮೂಲಕ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಎನ್ ಡಿಟಿವಿ ಇಮ್ಯಾಜಿನ್ ಗೂ ಲಾಭವಾಗಿದೆ. ನಿರೀಕ್ಷೆಗೂ ಮೀರಿ ಟಿಆರ್ ಪಿ ರೇಟಿಂಗ್ ದಾಖಲಾಗಿದೆ. ಕಾರ್ಯಕ್ರಮ ಹೇಗಿತ್ತು? ನೀವೇನಾದರೂ ಇದೇ ರೀತಿ ಮದುವೆಯಾಗುತ್ತೀರಾ? ನಮ್ಮ ನಟೀಮಣಿಯರು ಈ ಬಗ್ಗೆ ಏನಂತಾರೆ? ರಮ್ಯಾ, ಶುಭಾ ಪುಂಜಾ, ಪ್ರಜ್ಞಾರ ಪ್ರತಿಕ್ರಿಯೆ ಇಲ್ಲಿದೆ.

ಮದುವೆ ಎಂಬುದು ಖಾಸಗಿ ವಿಷಯ
ನಾನು ಸಂಪೂರ್ಣ ಕಾರ್ಯಕ್ರಮನ್ನು ವೀಕ್ಷಿಸಿದ್ದೇನೆ. ಕಾರ್ಯಕ್ರಮ ನೋಡಿ ಖುಷಿಪಟ್ಟಿಲ್ಲ ಎಂದರೆ ಸುಳ್ಳು ಹೇಳಿದಂತಾಗುತ್ತದೆ. ನನ್ನ ಮಟ್ಟಿಗೆ ಸ್ವಯಂವರ ಅಥವಾ ಇನ್ನೇನೇ ಆಗಿರಲಿ ಮದುವೆ ಎಂಬುದು ಖಾಸಗಿಯಾಗಿದ್ದರೇನೆ ಚೆನ್ನ. ಇದನ್ನು ಇಡೀ ಜಗತ್ತು ನೋಡುವುದು ನನಗಿಷ್ಟವಿಲ್ಲ ಎನ್ನುತ್ತಾರೆ ಶುಭಾ ಪೂಂಜಾ.

ರಾಖಿಯೊಂದಿಗೆ ನನ್ನನ್ನು ಹೋಲಿಸಬೇಡಿ!
ಯಾವುದೋ ನ್ಯೂಸ್ ಚಾನಲ್ ನಲ್ಲಿ ಬೆಳಗ್ಗೆಯಿಂದ ಸಂಜೆತನಕ ರಾಖಿ ಕಾ ಸ್ವಯಂವರದ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದರು. ಸಂಪೂರ್ಣ ಕಾರ್ಯಕ್ರಮ ನೋಡದಿದ್ದರೂ ಸಣ್ಣ ಸಣ್ಣ ದೃಶ್ಯವನ್ನೂ ನೋಡಿದ್ದೇನೆ.ತಕ್ಕಮಟ್ಟಿಗೆ ಮನರಂಜನೆ ಕಾರ್ಯಕ್ರಮ ಅನ್ನಬಹುದು. ಆದರೆ ಈ ರೀತಿಯ ಯಾವುದೇ ಕಾರ್ಯಕ್ರಮದ ಭಾಗವಾಗುವುದೂ ನನಗೆ ಇಷ್ಟವಿಲ್ಲ.ಹಾಗೆಯೇ ರಾಖಿ ಸಾವಂತ್ ರೊಂದಿಗೆ ನನ್ನ ಹೋಲಿಸಲೂ ಬೇಡಿ ಎನ್ನುತ್ತಾರೆ ರಮ್ಯಾ.

ಇದು ನನ್ನ ಕೈಲಾಗದ ಕೆಲಸ
ಇದೊಂದು ಶುದ್ಧ ಮನರಂಜನಾತ್ಮಕ ಕಾರ್ಯಕ್ರಮವಾಗಿತ್ತು. ಆದರೆ ನಾನಂತೂ ಯಾವುದೇ ಕಾರಣಕ್ಕೂ ಈ ರೀತಿ ಮಾಡುವುದಿಲ್ಲ. ಈ ರೀತಿ ಮಾಡಲು ನನ್ನಿಂದ ಸಾಧ್ಯವೂ ಇಲ್ಲ! ಎಂದು ರಾಖಿ ಕಾ ಸ್ವಯಂವರದ ಬಗ್ಗೆ ನಟಿ ಪ್ರಜ್ಞಾ ಪ್ರತಿಕ್ರಿಯಿಸಿದರು. ಒಟ್ಟಿನಲ್ಲಿ ರಾಖಿ ಕಾ ಸ್ವಯಂವರ ನಮ್ಮ ಬಹುತೇಕ ನಟಿಯರಿಗೆ ತುಂಬಾ ಇಷ್ಟ ಸ್ವಲ್ಪ ಕಷ್ಟ ಅನ್ನುವಂತಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada